ಮಲ್ಪೆ: ದಿನಾಂಕ :15/11/2024 (ಹಾಯ್ ಉಡುಪಿ ನ್ಯೂಸ್) ಕೆಮ್ಮಣ್ಣು ರಸ್ತೆಯಲ್ಲಿ ಅಕ್ರಮವಾಗಿ ಜಲ್ಲಿ ಕಲ್ಲು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಚಾಲಕನನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಲೋಹಿತ್ ಕುಮಾರ್ ಸಿಎಸ್ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಲೋಹಿತ್ ಕುಮಾರ್ ಸಿಎಸ್ ಅವರು ದಿನಾಂಕ :14-11-2024 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ಶಾಲೆಗುಡ್ಡೆ ಬಳಿ ಬರುತ್ತಿರುವಾಗ ಜಲ್ಲಿಕಲ್ಲು ತುಂಬಿರುವ ಒಂದು ಟಿಪ್ಪರ್ ಕೆಮ್ಮಣ್ಣು ಕಡೆಯಿಂದ ಹೂಡೆ ಕಡೆಗೆ ಹೋಗುತ್ತಿದ್ದು ಪೊಲೀಸರು ಹೂಡೆ ಶಾಲೆಗುಡ್ಡೆ ಬಳಿ ಸಂಜೆ ವಾಹನವನ್ನು ನಿಲ್ಲಿಸಿ ವಾಹನವನ್ನು ಪರಿಶೀಲಿಸಿದಾಗ KL-24-E-4209 ನೇ ನೊಂದಣಿಯ 407 ಟಿಪ್ಪರ್ ಆಗಿದ್ದು 1.5 ಯುನಿಟ್‌ನಷ್ಟು ಜಲ್ಲಿಕಲ್ಲು ತುಂಬಿಸಿರುವುದು ಕಂಡು ಬಂದಿರುತ್ತದೆ ಎಂದು ದೂರಲಾಗಿದೆ.
ಪೊಲೀಸರು ವಾಹನದ ಚಾಲಕನ ಹೆಸರು ವಿಚಾರಿಸಿದಾಗ ತನ್ನ ಹೆಸರು ಕೃಷ್ಣ ಎಂಬುದಾಗಿ ತಿಳಿಸಿದ್ದು, ಆತನ ಬಳಿ ಜಲ್ಲಿಕಲ್ಲು ಸಾಗಾಟ ಮಾಡಲು ಬೇಕಾದ ಪರವಾನಿಗೆ ಬಗ್ಗೆ ಕೇಳಿದಾಗ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾನೆ ಎನ್ನಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:303(2) ಬಿಎನ್ಎಸ್, ಕಲಂ:4, 4ಎ, 21 ಎಮ್ಎಮ್ಆರ್ಡಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.