Spread the love
  • ಮಲ್ಪೆ: ದಿನಾಂಕ : 14/11/2024‌ (ಹಾಯ್ ಉಡುಪಿ ನ್ಯೂಸ್) ಪಡುಕೆರೆ ಪರಿಸರದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದಲ್ಲಿಗೆ ಮಲ್ಪೆ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ(ತನಿಖೆ)ರಾದ ಲೋಹಿತ್ ಕುಮಾರ್ ಸಿಎಸ್ ಅವರು ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದಾರೆ.
  • ಮಲ್ಪೆ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಲೋಹಿತ್ ಕುಮಾರ್ ಸಿಎಸ್ ಅವರು ದಿನಾಂಕ:13-11-2024 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಪಡುಕೆರೆ ರಸ್ತೆಯಲ್ಲಿರುವ ಎಂ.ಡಿ ಬಾರ್‌ ಹಿಂಭಾಗದ ಖಾಲಿ ಜಾಗದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್‌ ಜುಗಾರಿ ಆಟವನ್ನು ಆಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ನೋಡಿದಾಗ ಸ್ಥಳದಲ್ಲಿ ಕೆಲವು ಜನರು ಸುತ್ತುವರಿದು ಕುಳಿತಿದ್ದರು ಎನ್ನಲಾಗಿದೆ.
  • ಅವರಲ್ಲಿ ಓರ್ವನು ತನ್ನ ಕೈಯಲ್ಲಿ ಇಸ್ಪೀಟು ಎಲೆಗಳನ್ನು ಹಿಡಿದುಕೊಂಡು, ಹಳದಿ ಬಣ್ಣದ ಟರ್ಪಾಲು ಮೇಲೆ ಅಂದರ್‌ ಬಾಹರ್‌ ಹೇಳಿ, ಎಲೆಗಳನ್ನು ಹಾಕುತ್ತಿದ್ದು, ಉಳಿದ ಜನರು ಅಂದರ್‌ ಬಾಹರ್‌ ಹೇಳಿ ಹಣವನ್ನು ಪಣವನ್ನಾಗಿ ಇಟ್ಟು ಜೂಜಾಟ ಆಡುತ್ತಿದ್ದರು ಎಂದು ದೂರಲಾಗಿದೆ .
  • ಪೊಲೀಸರು ಜುಗಾರಿ ಆಟ ಆಡುತ್ತಿದ್ದವರನ್ನು ಬಂಧಿಸಿ ಅವರ ಹೆಸರು ವಿಳಾಸ ವಿಚಾರಣೆ ನಡೆಸಿದಾಗ 1) ಸಾಗರ್‌,2) ರಾಮನ ಯಾನೆ ರಮೇಶ, 3) ಮಲ್ಲಪ್ಪ ರಾಮಪ್ಪ ಮಾಯಕೊಂಡ, 4) ಹನುಮಂತ, 5) ಸುರೇಶ, 6) ಮಹೇಶ, 7) ಬಾಶಾ ಸಾಬ್‌, 8) ಯಮುನಪ್ಪ, 9) ತಿಪ್ಪಯ್ಯ, 10) ಬಸವರಾಜ 11) ಜುಲೇಶ್‌ ತೇಜಪ್ಪ ಕಾರಬಾರಿ, 12) ಪ್ರಕಾಶ್‌ ಎಂಬುದಾಗಿ ತಿಳಿಸಿದ್ದಾರೆ .
  • ಆರೋಪಿಗಳು ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ಸ್ಥಳದಲ್ಲಿ ಹಾಸಿದ್ದ ಹಳದಿ ಬಣ್ಣದ ಟರ್ಪಾಲು ಮೇಲಿದ್ದ ಒಟ್ಟು ನಗದು ಹಣ ರೂಪಾಯಿ 27,070/- ರೂಪಾಯಿ ಹಣ ಹಾಗೂ ಇಸ್ಪೀಟ್ ಆಡಲು ಬಳಸಿದ ಹಳದಿ ಬಣ್ಣದ ಟರ್ಪಾಲು, ಇಸ್ಪೀಟು ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ:87 KP ACT ರಂತೆ ಪ್ರಕರಣ ದಾಖಲಾಗಿದೆ.
error: No Copying!