Spread the love

ಶಂಕರನಾರಾಯಣ: ದಿನಾಂಕ:12-11-2024(ಹಾಯ್ ಉಡುಪಿ ನ್ಯೂಸ್) ಪರವಾನಿಗೆ ಹೊಂದಿರುವ ಬಂದೂಕಿನಿಂದ ಮುಳ್ಳು ಹಂದಿ ಭೇಟೆಯಾಡಿದ್ದ ಇಬ್ಬರನ್ನು ಅರಣ್ಯಾಧಿಕಾರಿ ರೇಷ್ಮಾ ಫೆರಾವೋ ಅವರು ಬಂಧಿಸಿದ್ದಾರೆ.

ಕುಂದಾಪುರ ತಾಲೂಕು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ರೇಷ್ಮಾ ಫೆರಾವೋ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ದಿನಾಂಕ 03/10/2024 ರಂದು ಕುಂದಾಪುರ ತಾಲೂಕು ಅಂಪಾರು ಗ್ರಾಮದ ಮೂಡುಬಗೆ ಎಂಬಲ್ಲಿನ ನಿವಾಸಿ  ಬಸವ ಯಾನೆ ರಾಮ ಎಂಬುವವನ ವಾಸ್ತವ್ಯದ ಮನೆಯೊಳಗೆ ಮುಳ್ಳುಹಂದಿ ಮಾಂಸವನ್ನು ಅಕ್ರಮವಾಗಿ ತಂದು ಪ್ರಿಡ್ಜ್ ನ ಒಳಗಡೆ ಇಟ್ಟಿದ್ದು, ಅಲ್ಲಿಗೆ ದಾಳಿ ನಡೆಸಿ ಈ ಬಗ್ಗೆ ವಿಚಾರಿಸಿದಾಗ ಬಸವನು ಅಂಪಾರು ಗ್ರಾಮದ ಗೌಂಜಿ ಎಂಬಲ್ಲಿನ ನಿವಾಸಿ ಅಬ್ಬು ಅಹಮ್ಮದ್ ಯಾನೆ ಮೊಯ್ದಿನ್ ಸಾಹೇಬ್  ಎಂಬವನೊಂದಿಗೆ  ಸೇರಿಕೊಂಡು ಬಸವ ರವರ ಪರವಾನಿಗೆ ಹೊಂದಿರುವ ಎಸ್.ಬಿ.ಎಂ.ಎಲ್ ಬಂದೂಕಿನ ಮೂಲಕ ಮುಳ್ಳುಹಂದಿಯನ್ನು ಹತ್ಯೆಗೈದು ಮಾಂಸವನ್ನಾಗಿ ತಯಾರಿಸಿ ಪ್ರಿಡ್ಜ್ ನಲ್ಲಿ ಇಟ್ಟಿರುವುದನ್ನು ಅಕ್ರಮವೆಂದು ಈಬಗ್ಗೆ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಕಲಂ: 2(16), 9, 39, 44(1), 50, 51 ಮತ್ತು 55 ರಂತೆ ಶಿಕ್ಷಾರ್ಹ ಅಪರಾಧವೆಸಗಿರುವುದರಿಂದ 27/2024-25 ದಿನಾಂಕ 03/10/2024 ನ್ನು ದೂರನ್ನು ದಾಖಲಿಸಿಕೊಂಡಿದ್ದಾರೆ

ಪ್ರಕರಣವು ಶಂಕರನಾರಾಯಣ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿರುವುದರಿಂದ ಹಾಗೂ ಪ್ರಕರಣದಲ್ಲಿ ವಶಪಡಿಸಿರುವ ಬಂದೂಕು ಆರ್ಮ್ಸ್ ಕಾಯಿದೆ ಯಡಿಯಲ್ಲಿ ಬರುವುದರಿಂದ ಮತ್ತು ಬಂದೂಕು ಪರವಾನಿಗೆ ಹೊಂದಿರುವ ಬಂದೂಕಾಗಿದ್ದು ಆರೋಪಿಗಳು ಬಂದೂಕು ಪರವಾನಿಗೆ ಷರತ್ತನ್ನು ಉಲ್ಲಂಘನೆ ಮಾಡಿರುವುದರಿಂದ ಆರ್ಮ್ಸ್ ಕಾಯಿದೆಯ ಕಲಂ 25 ರಂತೆ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಶಂಕರನಾರಾಯಣ ವಲಯ, ಅರಣ್ಯಾಧಿಕಾರಿ ಯವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ  ಕಲಂ: 3, 25, 30 ಆರ್ಮ್ಸ್ ಕಾಯಿದೆ 1959 ರಂತೆ ಪ್ರಕರಣ ದಾಖಲಾಗಿದೆ.

error: No Copying!