Spread the love

ಅಮಾಸೆಬೈಲು: ದಿನಾಂಕ 10.11.2024 (ಹಾಯ್ ಉಡುಪಿ ನ್ಯೂಸ್) ಜಡ್ಡಿನಗದ್ದೆ ರಸ್ತೆಯಲ್ಲಿ ಜಾನುವಾರುಗಳ ಕಳ್ಳತನ ನಡೆಸುತ್ತಿದ್ದ ಲ್ಲಿಗೆ ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸೌಮ್ಯ ಜೆ ರವರು ದಾಳಿ ನಡೆಸಿ ಬಂಧಿಸಿದ್ದಾರೆ.

ಅಮಾಸೆಬೈಲು ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸೌಮ್ಯ ಜೆ ರವರು ದಿನಾಂಕ:09-11-2024ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ  ಅಮಾಸೆಬೈಲು ಪೇಟೆಯಲ್ಲಿರುವಾಗ, ಮಾಹಿತಿದಾರರೋರ್ವರು ಕರೆ ಮಾಡಿ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಂತೆ ಚಂದ್ರ ಎ ಕೆ,  ಪಿ ಎಸ್ ಐ(ತನಿಖೆ) ಹಾಗೂ ಠಾಣೆಯ ಸಿಬ್ಬಂದಿಯವರಾದ ಮಲ್ಲೇಶ್ ಮತ್ತು ಸುಧಾಕರ್ ರವರನ್ನು ಅಮಾಸೆಬೈಲು ಪೇಟೆಗೆ ಬರಮಾಡಿಕೊಂಡು ಜಡ್ಡಿನಗದ್ದೆ-ನಡಂಬೂರು ತಿರುವಿನ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಮಯ 11:45 ಗಂಟೆಗೆ ಜಡ್ಡಿನಗದ್ದೆ ಕಡೆಯಿಂದ ಒಂದು ವಾಹನ ಬರುತ್ತಿದ್ದು, ಪಿಎಸ್ಐ ಸೌಮ್ಯಾ ಮತ್ತು ಸಿಬ್ಬಂದಿಯವರು ನಿಲ್ಲಿಸುವಂತೆ ಸೂಚನೆ ನೀಡಿದಾಗ ವಾಹನವನ್ನು ನಿಲ್ಲಿಸದೇ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ನಡಂಬೂರು ಕಡೆಗೆ ಹೋಗಿದ್ದು, ಜೀಪ್ ಲೈಟ್ ಬೆಳಕಿನ ಸಹಾಯದಿಂದ ನೋಡಿದಾಗ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವಾಗಿದ್ದು ನಿಲ್ಲಿಸದೇ ಹೋದ ಸ್ಕಾರ್ಪಿಯೋ ವಾಹನವನ್ನು ಬೆನ್ನಟ್ಟಿ ಹೋದಾಗ ನಿಲ್ಸ್ ಕಲ್ ಎಂಬಲ್ಲಿ ಮಣ್ಣು ರಸ್ತೆಯಲ್ಲಿ ವಾಹನವನ್ನು ಬಿಟ್ಟುಓಡಿ ಹೋಗಿದ್ದು ಪಕ್ಕದ ಕಾಡಿನಲ್ಲಿ ಹುಡುಕಾಡಿದರೂ ಯಾರೂ ಪತ್ತೆಯಾಗಿರುವುದಿಲ್ಲ ಎನ್ನಲಾಗಿದೆ.

ನಂತರ ಬೀಟ್ ಸಿಬ್ಬಂದಿಯವರು  ಸ್ಕಾರ್ಪಿಯೋ ವಾಹನವನ್ನು ಪರಿಶೀಲಿಸಿದಾಗ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಅದರ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ KA-19 -P- 5866 ಎಂಬುದಾಗಿ ನೊಂದಣಿ ಸಂಖ್ಯೆ ಬರೆದಿದ್ದು,ವಾಹನವನ್ನು ನಿಲ್ಲಿಸುವ ರಭಸಕ್ಕೆ ಹಿಂಬದಿಯ ಬಾಗಿಲು ತೆರೆದಿರುತ್ತದೆ. ಸ್ಕಾರ್ಪಿಯೋ ವಾಹನದ ಒಳಗಡೆ ಮಧ್ಯದ ಹಾಗೂ ಹಿಂದಿನ ಆಸನಗಳನ್ನು ಮಡಚಿ ಹಳದಿ ಬಣ್ಣದ ಪ್ಲಾಸ್ಟಿಕ್ ಟರ್ಪಾಲ್ ಹಾಸಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಹಾಗೂ ತಲೆಯನ್ನು ನೈಲಾನ್ ಹಗ್ಗದಿಂದ ಕಟ್ಟಿದ್ದು,ಆ ಸ್ಕಾರ್ಪಿಯೋ ವಾಹನವನ್ನು ಹಾಗೂ ವಾಹನದಲ್ಲಿದ್ದ ಒಟ್ಟು 06 ಜಾನುವಾರುಗಳನ್ನು,  ಪರಿಶೀಲಿಸಿ ನೋಡಿದಾಗ ಒಂದು ಗಂಡು ಕರು ಮೃತಪಟ್ಟಿದ್ದು,ಆ ಸ್ಕಾರ್ಪಿಯೋ ವಾಹನದಲ್ಲಿ ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಹಿಂಸಾತ್ಮಕವಾಗಿ ಕಟ್ಟಿಕೊಂಡು ಖಸಾಯಿಖಾನೆಗೆ ಇಲ್ಲವೇ ಮಾಂಸಮಾಡಿ ಮಾರಾಟಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದು, 06- ಜಾನುವಾರುಗಳು, ಹಗ್ಗ-1‌, ಹಳದಿ ಬಣ್ಣದ ಪ್ಲಾಸ್ಟಿಕ್‌ ಟರ್ಪಾಲ್ -1, ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು-1, ನೀಲಿ ಬಣ್ಣದ ಒಪ್ಪೋ ಮೊಬೈಲ್-1‌ಸಮೇತ ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ  ಕಲಂ:281,303(1) ಬಿಎನ್‌ಎಸ್‌, ಕಲಂ:4,5,12 karnatakaPrevention of Slaughter and Preservation of Cattle Act-2020 and U/s 11(1) (d) Prevention Cruelity to Animals Act:-1960 ರಂತೆ ಪ್ರಕರಣ ದಾಖಲಾಗಿದೆ.

error: No Copying!