ಉಡುಪಿ: ದಿನಾಂಕ:10-11-2024) ಹಾಯ್ ಉಡುಪಿ ನ್ಯೂಸ್)
ಮಹಾಲಕ್ಷ್ಮಿ ಕೋ – ಓಪರೇಟಿವ್ ಬ್ಯಾಂಕ್ ಲಿ. ಉಡುಪಿ ಯವರು ಪತ್ರ ಮುಖಾಂತರ ದಿನಾಂಕ 9-11-2024 ರಂದು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಮಾಣಕ್ಕೆ ದಿನ ನಿಗಧಿಗೊಳಿಸಿರುವಂತೆ ನಿನ್ನೆ ದಿನಾಂಕ 9-11-2024 ರಂದು ಮಹಾಲಕ್ಷ್ಮಿ ಕೋ – ಓಪರೇಟಿವ್ ಬ್ಯಾಂಕ್ ಲಿ. ಉಡುಪಿ ಇಲ್ಲಿನ ಪ್ರಧಾನ ವ್ಯವಸ್ಥಾಪಕರಾದ ಶರತ್ ಕುಮಾರ್ ಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಕರಂಬಳ್ಳಿ ಶ್ರೀ ವೆಂಕಟರಮಣ ಮುಖ್ಯ ಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಮಾಣಕ್ಕೆ ಬಂದು, ಯಾವುದೇ ಆಣೆ ಪ್ರಮಾಣ ಮಾಡದೆ ಬದಲಾಗಿ ಸಿಬ್ಬಂದಿಗಳ ಜೊತೆ ದೇವರ ಮುಂದೆ ಪ್ರಾರ್ಥನೆ ಮಾಡಿ ಪ್ರಾರ್ಥನೆಗೆ ಸೀಮಿತಗೊಳಿಸಿ ತೆರಳಿದ್ದಾರೆ.
ಮಹಾಲಕ್ಷ್ಮಿ ಕೋ – ಓಪರೇಟಿವ್ ಬ್ಯಾಂಕ್ ಲಿ. ನವರಿಂದ ಅನ್ಯಾಯಕ್ಕೊಳಗಾದ ಸಂತೃಸ್ಥರು ಲಿಖಿತವಾಗಿ ತಾವು ಪಡೆದ ಹಣವನ್ನು ಬ್ಯಾಂಕ್ ನ ನಿಯಮದಂತೆ ಬಡ್ಡಿ ಸಮೇತ ಪಾವತಿಸಲು ಬದ್ದರಿದ್ದೇವೆ. ಇದಕ್ಕೆ ನಮಗೆ ನ್ಯಾಯ ಒದಗಿಸಬೇಕು ಎಂದು ದೇವರ ಮುಂದೆ ಪ್ರಾರ್ಥಿಸಿದರು. ಮುಂದಿನ ದಿನಗಳಲ್ಲಿ ರಘುಪತಿ ಭಟ್ ಅವರು ಕಾನೂನಿನ ರೀತಿಯಲ್ಲಿ ನ್ಯಾಯಯುತವಾಗಿ ನಮಗೆ ನ್ಯಾಯ ದೊರಕಿಸಿಕೊಡಲಿ ಎಂದು ಸಂತ್ರಸ್ತರು ಪ್ರಾರ್ಥಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ದಿವಾಕರ ಐತಾಳರು ಪ್ರಾರ್ಥನೆ ನೆರವೇರಿಸಿ ಪೂಜೆ ಸಲ್ಲಿಸಿದರು. ನೂರಾರು ಮಂದಿ ಸಂತೃಸ್ಥರು ಉಪಸ್ಥಿತರಿದ್ದರು.