Spread the love

ಮಣಿಪಾಲ: ದಿನಾಂಕ:07-11-2024(ಹಾಯ್ ಉಡುಪಿ ನ್ಯೂಸ್) ಪರ್ಕಳ ಮುರತಕಡಿ ಎಂಬಲ್ಲಿ ನದಿ ದಂಡೆಯಲ್ಲಿ ಮರಳು ಕಳ್ಳತನ ನಡೆಯುತ್ತಿದ್ದಲ್ಲಿಗೆ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಅವರು ದಾಳಿ ನಡೆಸಿ ಅಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಅವರಿಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಹೊಳೆಬಾಗಿಲು ರಸ್ತೆಯ ಮುರತಕಡಿ ಎಂಬಲ್ಲಿ ಸುವರ್ಣ ನದಿಯ ದಂಡೆಯ ಮೇಲೆ ಯಾರೋ ಕಳ್ಳರು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸರಕಾರಿ ಸ್ಥಳವಾದ ಹೊಳೆಯಿಂದ ಮರಳನ್ನು ತೆಗೆದು ಸಾಗಾಟ ಮಾಡಲು ಸಂಗ್ರಹಿಸಿ ಇಟ್ಟ ಬಗ್ಗೆ ದಿನಾಂಕ:06-11-2024 ರಂದು ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ಮಾಡಿ ಮರಳು ಕಳ್ಳರು ಸಂಗ್ರಹಿಸಿಟ್ಟಿದ್ದ 15 ಬುಟ್ಟಿ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!