ಧಾರವಾಡ: ದಿನಾಂಕ:06-11-2024(ಹಾಯ್ ಉಡುಪಿ ನ್ಯೂಸ್)
ಸೋಮವಾರ ದಿನಾಂಕ 5 ನವೆಂಬರ್ 2024 ರಂದು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠ 2005/2006 ರಲ್ಲಿ ಸ್ಥಾಪಿಸಲ್ಪಟ್ಟ ಪರಶುರಾಮ ನೀಲನಾಯಕ ರವರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯನ್ನು ಅಧಿಕ್ರತ ಸಂಘಟನೆ ಎಂದು ಆದೇಶಿಸಿದೆ.
ಪರಶುರಾಮ ನಿಲನಾಯಕ ಅವರು 2005/2006ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ನೋಂದಣಿಗೊಳಿಸಿದ್ದರು. ನಂತರದ ದಿನಗಳಲ್ಲಿ ಕರ್ನಾಟಕದಲ್ಲಿ ಭೀಮವಾದ ಎಂಬ ಹೆಸರಿನಲ್ಲಿ ಸುಮಾರು ಸಂಘಟನೆಗಳು ನೋಂದಣಿಯಾಗಿದ್ದು, ನಮ್ಮ ಸಂಘಟನೆ ಹೆಸರಿನಲ್ಲಿ ಬೇರೆ ಸಂಘಟನೆಗಳು ನೋಂದಣಿಯಾಗಿದ್ದು ಅವುಗಳನ್ನೆಲ್ಲ ರದ್ದುಗೊಳಿಸಬೇಕು ಎಂದು ಪರಶುರಾಮ ನೀಲನಾಯಕ ಅವರು ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಪರಶುರಾಮ ನೀಲನಾಯಕ ಅವರ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ 2005/06 ರಲ್ಲಿ ಭೀಮವಾದ ಸ್ಥಾಪನೆಯಾಗಿರುವ ಸಂಘಟನೆಯನ್ನು ಹೊರತುಪಡಿಸಿ ನಂತರದ ದಿನಗಳಲ್ಲಿ ನೋಂದಣಿಗೊಂಡಿರುವ ಭೀಮವಾದ ಹೆಸರಿನ ಎಲ್ಲ ಸಂಘಟನೆಗಳನ್ನು ರದ್ದುಗೊಳಿಸುವಂತೆ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠ ದಿನಾಂಕ:05-11-2024 ರಂದು ಆದೇಶ ಹೊರಡಿಸಿದೆ,
ಈ ಆದೇಶ ನೊಂದವರ ಪರವಾಗಿ ಧ್ವನಿ ಎತ್ತುವ ನೊಂದವರ ಪರವಾಗಿ ಹೋರಾಡುವ ನಮ್ಮ ಪರಶುರಾಮ ನೀಲನಾಯಕ ಹಾಗೂ ಎಮ್ ಸಿ ನಾರಾಯಣ್ ಅವರ ನಾಯಕತ್ವದ ಭೀಮವಾದ ಸಂಘಟನೆಯ ಎಲ್ಲ ಕಾರ್ಯಕರ್ತರಿಗೆ ಖುಷಿ ತಂದಿದೆ ಎಂದು ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.