Spread the love

ಕುಂದಾಪುರ: ದಿನಾಂಕ:05-11-2024(ಹಾಯ್ ಉಡುಪಿ ನ್ಯೂಸ್) ತಾಲೂಕು ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿಯವರಿಗೆ ರೋಗಿಯ ಕಡೆಯವರು ಜೀವಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮೂರ್ತಿರಾಜ್ (48) ಎಂಬವರು  ಇದೀಗ 2 ½ ವರ್ಷದಿಂದ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅವರು ದಿನಾಂಕ : 03-11-2024 ರಂದು ರಾತ್ರಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿರುವಾಗ  ರಾಧ ಎಂಬ ಮಹಿಳೆಯು ಇನ್ನೋರ್ವ ಮಹಿಳೆಯೊಂದಿಗೆ ಹೊಟ್ಟೆನೋವು ಎಂದು ಚಿಕಿತ್ಸೆಗೆ ಬಂದಿದ್ದು, ಅವರನ್ನು ಶೂಶ್ರೂಶಾಧಿಕಾರಿಯಾದ ಶೋಭಾ ಕುಮಾರಿಯವರ ಸಮಕ್ಷಮದಲ್ಲಿ ಸಮಾಲೋಚನೆ ನಡೆಸಿ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ಒಳರೋಗಿಯಾಗಿ ದಾಖಲಾಗಲು ಸೂಚಿಸಿ ಆಸ್ಪತ್ರೆಯ Case Sheet ನ್ನು ಬರೆದು ಕೊಟ್ಟಿದ್ದು ಆ ಸಮಯ ಆ ಮಹಿಳೆಯ ಗಂಡನಾದ ನಾಗರಾಜ ಬೀಜಾಡಿ ಎಂಬವರು ಬಂದಿದ್ದು ಅವರಲ್ಲಿ Admission ಮಾಡಿ ಬರಲು ತಿಳಿಸಿರುವುದಾಗಿ ವೈದ್ಯಾಧಿಕಾರಿ ಮೂರ್ತಿ ರಾಜ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಪೇಷೆಂಟ್ ರಾಧರವರನ್ನು ಶೂಶ್ರೂಶಾಧಿಕಾರಿಯಾದ ಶೋಭಾ ಕುಮಾರಿಯವರ ಸಮಕ್ಷಮದಲ್ಲಿ ಸಮಾಲೋಚನೆ ನಡೆಸಿದ್ದು ಆಗ ರಾಧ ಹಾಗೂ ಅವರ ಗಂಡನು ನಾವಿಲ್ಲಿಂದ ಹೋಗೋಣವೆಂದು ಹೊರಗೆ ಹೋಗಿ ನಂತರ ಸುಮಾರು ರಾತ್ರಿ 11:45 ಗಂಟೆಗೆ ರಾಧಾಳ ಗಂಡನಾದ ನಾಗರಾಜ ರವರು ಎಕಾಏಕಿಯಾಗಿ ತುರ್ತುಚಿಕಿತ್ಸಾ ಕೊಠಡಿಗೆ ಬಂದು ಕರ್ತವ್ಯ ನಿರತರಾಗಿದ್ದ  ಮೂರ್ತಿರಾಜ್ ರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿ, ಮೂರ್ತಿರಾಜ್ ರ ಟೇಬಲ್‌ ಮೇಲಿದ್ದ ಸರಕಾರಿ ದಾಖಲೆಗಳನ್ನು ಹರಿದು ಬಿಸಾಡಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ರಾಧಾರವರ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಆಸ್ಪತ್ರೆಯ ಕಾರಿಡಾರ್‌ ನಲ್ಲಿ ನಾಗರಾಜ ಹಾಗೂ ಇನ್ನೋರ್ವ ಮಹಿಳೆಯು ಪುನಃ ಮೂರ್ತಿರಾಜ್ ರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಜೀವಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ:352, 351(2), 132, RW 3(5) BNS U/S 3, 3(A), 4 Karnataka Prohibition Of Violence Against Medicare Service Personnel And Damage To Property In Medicare Service Institutions Act , 2009 ರಂತೆ ಪ್ರಕರಣ ದಾಖಲಾಗಿದೆ.

error: No Copying!