ಗಂಗೊಳ್ಳಿ: ದಿನಾಂಕ:04-11-2024(ಹಾಯ್ ಉಡುಪಿ ನ್ಯೂಸ್) ಕೊಲೆಯತ್ನ ಕ್ಕೊಳಗಾಗಿದ್ದ ದೂರುದಾರರಿಗೆ ಆರೋಪಿಗಳು ಪೊಲೀಸ್ ದೂರು ಹಿಂಪಡೆಯ ಬೇಕೆಂದು ದೂರುದಾರರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಬೈಂದೂರು,ಹಡವು ಗ್ರಾಮದ ನಿವಾಸಿ ಅರವಿಂದ ಎಂಬವರಿಗೆ ದಿನಾಂಕ :18-10-2024 ರಂದು ಸಚಿನ್ ಹಾಗೂ ಇತರ ಇಪ್ಪತ್ತು ಜನ ಸೇರಿಕೊಂಡು ಮಾರಕಾಯುಧ ಹಾಗೂ ಪಿಸ್ತೂಲ್ ಹಿಡಿದುಕೊಂಡು ಕೊಲೆ ಯತ್ನ ನಡೆಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ ಎನ್ನಲಾಗಿದೆ. ದಿನಾಂಕ:24-10-2024 ರಂದು ರಾತ್ರಿ ಅರವಿಂದ ಅವರು ಮನೆಯ ಬಳಿ ವಾಕಿಂಗ್ ಮಾಡುತ್ತಿರುವಾಗ ಅರವಿಂದರವರ ಮೊಬೈಲ್ ಗೆ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ನೀವು ಮೊನ್ನೆ ನೀಡಿರುವ ದೂರು ವಾಪಾಸ್ಸು ತಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ:351(4) BNS ರಂತೆ ಪ್ರಕರಣ ದಾಖಲಾಗಿದೆ.