ಉಡುಪಿ: ದಿನಾಂಕ:03-11-2024 (ಹಾಯ್ ಉಡುಪಿ ನ್ಯೂಸ್) ಪುತ್ತೂರು ಗ್ರಾಮದ ನಾರಾಯಣ ನಗರದಲ್ಲಿ ಗಾಂಜಾ ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.
ಉಡುಪಿ ನಗರದಲ್ಲಿ ಮಾದಕ ವಸ್ತು ಮಾರಾಟ ದಂಧೆಯ ಬೆನ್ನು ಹಿಡಿದಿರುವ ಜಿಲ್ಲಾ ಪೊಲೀಸ್ ಇಲಾಖೆಯ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ರಾದ ರಾಮಚಂದ್ರ ನಾಯಕ್ ಮತ್ತು ಪ್ರೊಬೆಷನರಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಗಾಂಜಾ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದಾಗ ಉಡುಪಿ ತಾಲೂಕು ಪುತ್ತೂರು ಗ್ರಾಮದ, ನಾರಾಯಣ ನಗರ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರು ನಿಷೇಧಿತ ಮಾದಕ ವಸ್ತು ಗಾಂಜಾ ಹೊಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಅಲ್ಲಿ ದ್ವಿಚಕ್ರವಾಹನ ದಲ್ಲಿ ಗಾಂಜಾ ಮಾರಾಟ ಮಾಡಲು ನಿಂತಿದ್ದ 1) ಮಹಮ್ಮದ್ ಸಪಾಝ್ (29) ನರಿಂಗಾಣ ಗ್ರಾಮ , ಬಂಟ್ವಾಳ ತಾಲೂಕು 2) ಚರಣ್ ಯು ಭಂಡಾರಿ (19) ಸಂತೆಕಟ್ಟೆ, ಪುತ್ತೂರು ಗ್ರಾಮ, ಉಡುಪಿ ಎಂಬಿಬ್ಬರನ್ನು ಬಂಧಿಸಿ ಅವರಿಂದ 53,300 ರೂ ಮೌಲ್ಯದ 740 ಗ್ರಾಂ ಗಾಂಜಾ, ಹೋಂಡಾ ಆಕ್ಟೀವಾ ಸ್ಕೂಟರ್ ಅಂದಾಜು ಮೌಲ್ಯ 25000 ,ನಗದು ರೂ 2170 ,2 ಮೊಬೈಲ್ ಫೋನ್ ಅಂದಾಜು ಮೌಲ್ಯ ರೂ 18000, 1-ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ :B(C),20(b) (ii)Act1985 ರಂತೆ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಪವನ್ ನಾಯಕ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿ ಯವರಾದ ಪ್ರವೀಣ್ ಕುಮಾರ್ , ಪ್ರವೀಣ್, ರಾಜೇಶ್, ವೆಂಕಟೇಶ್, ನಿಲೇಶ್, ರಾಘವೇಂದ್ರ, ಪ್ರಶಾಂತ್ ಮತ್ತು ಚರಣ್ ರಾಜ್ ಅವರು ಭಾಗವಹಿಸಿದ್ದರು.