ಉಡುಪಿ: ದಿನಾಂಕ:03-11-2024(ಹಾಯ್ ಉಡುಪಿ ನ್ಯೂಸ್)
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ:01-11-2024 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಕರವೇ ಉಡುಪಿ ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ಕನ್ನಡ ಬಾವುಟವನ್ನು ಧ್ವಜಾರೋಹಣ ಮಾಡುವ ಮೂಲಕ ಉಡುಪಿ ನಗರ ಸಭೆಯ ಮಾಜಿ ಪೌರಾಯುಕ್ತರಾದ ಶ್ರೀಯುತ ರಾಯಪ್ಪನವರು ನೆರವೇರಿಸಿದರು .
ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಸಿ ಸಿ ಹೇಮಲತಾ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ರಾಯಪ್ಪನವರು ಸಭೆಯನ್ನುದ್ದೇಶಿಸಿ ಕನ್ನಡ ನಾಮಫಲಕದ ವಿಷಯದ ಕುರಿತು ಮಾತನಾಡಿದರು ,ನಾವು ಯಾವ ಊರಿಗೆ ಹೋದರು ನಮ್ಮ ಕನ್ನಡ ಭಾಷೆಯನ್ನು ಮರೆಯಬಾರದು, ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು.
ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಸಿ.ಸಿ ಹೇಮಲತಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ ಅಂತಹ ಹಲವಾರು ವೀರ ಮಹಿಳೆಯರು ಹುಟ್ಟಿದಂತಹ ಕನ್ನಡನಾಡು. ಅಂತ ನಾಡಲ್ಲಿ ಇದ್ದು ನಾವು ಕೂಡ ಅವರಂತೆ ಆಗಬೇಕು. ನದಿಗಳಿಗೆ ಹೆಣ್ಣಿನ ಹೆಸರನ್ನೇ ಇಟ್ಟಿದ್ದಾರೆ, ಪ್ರತಿಯೊಂದು ಹೆಣ್ಣಿಗೂ ಅವಳದೇ ಸ್ಥಾನಮಾನ ಇರುತ್ತದೆ. ಹೆಣ್ಣು ಮನಸು ಮಾಡಿದರೆ ಏನನ್ನೂ ಮಾಡಬಹುದು, ಹಾಗಿರುವಾಗ ನಮ್ಮ ರಕ್ಷಣಾ ವೇದಿಕೆಯ ಪ್ರತಿಯೊಬ್ಬ ಮಹಿಳೆಯರು ಯಾರಿಗೂ ಅಂಜದೆ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಯಶಸ್ವಿಯಾಗಬೇಕು ಎಂದರು.ನಾವು ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಕನ್ನಡ ನಾಡಲ್ಲಿ ಹುಟ್ಟಿ ಕನ್ನಡಕ್ಕೆ ಮೊದಲ ಆದ್ಯತೆಯನ್ನು ನಾವು ಕೊಡುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಂಡು ಹೋಗಬೇಕು, ಗೊಂದಲ ಎಂದು ಬಂದರೆ ಅದರಿಂದ ತಲೆಕೆಡಿಸಿಕೊಳ್ಳದೆ ತಮಗೆ ಕೊಟ್ಟಂತಹ ಹುದ್ದೆಗೆ ತಕ್ಕ ಹಾಗೆ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿ ದ್ದ ಹಲವರು ತಮ್ಮ ಅನಿಸಿಕೆಯ ಮಾತುಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಮಾತನಾಡಿ ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ನಮಗೆ 365 ದಿನ ಕನ್ನಡ ರಾಜ್ಯೋತ್ಸವವೇ ಆಗಿರುತ್ತದೆ , ಒಂದು ದಿನಕ್ಕೆ ಸೀಮಿತವಲ್ಲ ,ಕನ್ನಡ ರಾಜ್ಯೋತ್ಸವವನ್ನು ಪ್ರತಿದಿನ ಎಂಬಂತೆ ಕನ್ನಡ ಪರವಾಗಿ ಆಚರಿಸುತ್ತಾ ಇರುತ್ತೇವೆ ಎಂದರು , ನಮ್ಮ ಕನ್ನಡದ ವಿಷಯದಲ್ಲಿ ತೊಂದರೆ ಕೊಟ್ಟಲ್ಲಿ ಕನ್ನಡ ಪರವಾಗಿ ಹೋರಾಟ ಮಾಡುವುದು ಖಚಿತ ಹಾಗೂ ಉಡುಪಿ ಜಿಲ್ಲೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯನ್ನು ನೀಡಿ ಎಲ್ಲರೂ ಸಹಕರಿಸಬೇಕು, ಎಲ್ಲದರಲ್ಲೂ ಕನ್ನಡ ಮೊದಲನೇ ಸ್ಥಾನದಲ್ಲಿ ಇರಬೇಕು ಎಂದು ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಹೇಳಿದರು .
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಸುಂದರ ಎ ಬಂಗೇರ. ಜಿಲ್ಲಾ ಮಹಿಳಾಧ್ಯಕ್ಷರು ಗೀತಾ ಪಾಂಗಾಳ. ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಲಾಲ್, ಜಿಲ್ಲಾ ಸಲಹೆಗಾರರಾದ ಪ್ರಕಾಶ್ ದೇವಾಡಿಗ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಅಲ್ಫೋನ್ಸ್ , ಗೋಪಾಲ್ ದೊರೆ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣಕುಮಾರ್, ಜಿಲ್ಲಾ ಕಾರ್ಯದರ್ಶಿ ಗಣೇಶ ಶೆಟ್ಟಿಗಾರ್, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಶಾಲಿನಿ,ಜಿಲ್ಲಾ ಮಹಿಳಾ ಜಾಲತಾಣ ಸಂಚಾಲಕಿ ರಶ್ಮಿ,,ಜಿಲ್ಲಾ ಮಹಿಳಾ ಕಾರ್ಯದರ್ಶಿಯಾದ ಚಂದ್ರಕಲಾ, ಮೋಹಿನಿ, ಜಿಲ್ಲಾ ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿಯಾದ ಆಶಾ, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸ್ಟಾನಿ ಡಿಸೋಜಾ, ಕಾಪು ತಾಲೂಕು ಮಹಿಳಾ ಅಧ್ಯಕ್ಷರಾದ ಶಶಿಕಲಾ ನವೀನ್, ಹಾಗೂ ಪದಾಧಿಕಾರಿಗಳು, ಜಿಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.