Spread the love

ಕುಂದಾಫುರ: ದಿನಾಂಕ:,02-11-2024(ಹಾಯ್ ಉಡುಪಿ ನ್ಯೂಸ್) ಗುಲ್ವಾಡಿ ಗ್ರಾಮದ ಮನೆಯೊಂದರಲ್ಲಿ ಗಾಂಜಾ ಮಾರಾಟ ನಡೆಸಲು ಸಂಗ್ರಹಿಸಿಟ್ಟಿದ್ದಲ್ಲಿಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್ಐ ರವರಾದ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರಿಗೆ ದಿನಾಂಕ 01/11/2024 ರಂದು ಗುಪ್ತ ಮಾಹಿತಿದಾರರೋರ್ವರು ಗುಲ್ವಾಡಿ ಗ್ರಾಮದ ಉದಯನಗರ ಎಂಬಲ್ಲಿ ನಜರುಲ್ಲಾ ಖಾನ್‌ ಎಂಬವರ ಮನೆಯಲ್ಲಿ ಗಾಂಜಾವನ್ನು ಮಾರಾಟ ಮಾಡಲು ದಾಸ್ತಾನು ಇಟ್ಟುಕೊಂಡಿದ್ದಲ್ಲದೇ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದಂತೆ  ಕೂಡಲೇ ಆ ಮನೆಯ ಮತ್ತು ಆಪಾದಿತರ ಶೋಧನೆ ನಡೆಸಲು ದಾಳಿ ನಡೆಸಲು ಪೊಲೀಸ್‌ ಅಧೀಕ್ಷಕರ ಅನುಮತಿ ಪಡೆದು  ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .

ಆಪಾದಿತರ ಮನೆಗೆ ಹೋಗಿ ಶೋಧನೆ ನಡೆಸಿದಾಗ ಆಪಾದಿತರ ಮನೆಯ ಬೆಡ್‌ ರೂಮಿನಲ್ಲಿ ಟ್ರಾಲಿ ಸೂಟ್‌ ಕೇಸ್‌ ನಲ್ಲಿ ಅಡಗಿಸಿಟ್ಟಿದ್ದ 5 ಪ್ರತ್ಯೇಕ ಪ್ರತ್ಯೇಕ ಗಾಂಜಾ ಪ್ಯಾಕೆಟ್‌ ಗಳು ಸಿಕ್ಕಿದ್ದು ಅದನ್ನು  ಅಧಿಕಾರಿಯವರು ಪರಿಶೀಲಿಸಿ  ತೂಕ ಮಾಡಿಸಿ ನೋಡಿದಾಗ ಪ್ಯಾಕೆಟ್ ಗಳು ಪ್ಲಾಸ್ಟಿಕ್ ಕವರ್ ಸಮೇತ ಕ್ರಮವಾಗಿ 1) 2.016 ಕೆ.ಜಿ, 2) 2.008 ಕೆ.ಜಿ, 3) 2.010 ಕೆ.ಜಿ, 4) 2.00 ಕೆ.ಜಿ, ಮತ್ತು 5) ಅರೆ ತೆರೆದಿರುವ ಪ್ಯಾಕೆಟ್ 0.570 ಕೆ.ಜಿ ತೂಕ ಇದ್ದಿದ್ದು, ಒಟ್ಟು 8.608 ಕೆ.ಜಿ ಇರುತ್ತದೆ. ಸದ್ರಿ ಗಾಂಜಾವನ್ನು ಪ್ಲಾಸ್ಟಿಕ್‌ ಕವರ್‌ ನಿಂದ ಪ್ರತ್ಯೇಕಿಸಿ ಪಾರದರ್ಶಕ ಪ್ಲಾಸ್ಟಿಕ್‌ ಕವರ್‌ ಗೆ ಹಾಕಿ ತೂಕ ಮಾಡಿ ನೋಡಿದಾಗ 1) 1.972 ಕೆ.ಜಿ, 2) 1.948 ಕೆ.ಜಿ, 3) 1.960 ಕೆ.ಜಿ, 4) 1.966 ಕೆ.ಜಿ, ಮತ್ತು 5) ಅರೆ ತೆರೆದಿರುವ ಪ್ಯಾಕೆಟ್ 0.528 ಕೆ.ಜಿ ತೂಕ ಇದ್ದಿದ್ದು, ಒಟ್ಟು ತೂಕ 8 ಕೆ.ಜಿ 374 ಗ್ರಾಂ ತೂಕ ಇದ್ದು ಅಂದಾಜು ಮೌಲ್ಯ ಸುಮಾರು 3,34,800/- ರೂಪಾಯಿ ಆಗಿರುತ್ತದೆ ಎನ್ನಲಾಗಿದೆ.

ಗಾಂಜಾವನ್ನು ಸ್ವಾದೀನಪಡಿಸಿಕೊಂಡು ನಂತರ ಗಾಂಜಾ ತುಂಬಿಸಿಟ್ಟಿದ್ದ ಕವರ್‌ ಗಳನ್ನು ಹಾಗೂ ಗಾಂಜಾವನ್ನು ಬಚ್ಚಿಡಲು ಬಳಸಿದ ಸುಮಾರು 100/- ರೂಪಾಯಿ ಬೆಲೆ ಬಾಳುವ ಬೂದು ಬಣ್ಣದ ಟ್ರಾಲಿ ಸೂಟ್‌ ಕೇಸ್‌ ಮತ್ತು ಆಪಾದಿತರು ಗಾಂಜಾ ಮಾರಾಟ ಮಾಡಲು ಬಳಸಿದ ಸುಮಾರು 2000/- ರೂಪಾಯಿ ಮೌಲ್ಯದ ವಿವೋ ಮೋಬೈಲ್‌ ಹಾಗೂ 500/- ರೂಪಾಯಿ ಮೌಲ್ಯದ ನೋಕಿಯಾ ಕೀ-ಪ್ಯಾಡ್‌ ಮೊಬೈಲ್‌ ಫೋನ್‌ ಗಳನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ .

ನಂತರ ಆರೋಪಿ 1)ನಜರುಲ್ಲಾ ಖಾನ್‌ (40) ಗುಲ್ವಾಡಿ ಗ್ರಾಮ, ಕುಂದಾಪುರ 2) ಶ್ರೀಮತಿ ಫಾತಿಮಾ (33) ಗುಲ್ವಾಡಿ ಗ್ರಾಮ, ಕುಂದಾಪುರ ಇವರುಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆರೋಪಿಗಳಿಗೆ ಹಸೈನರ್‌ ಎಂಬ ವ್ಯಕ್ತಿಯು ಗಾಂಜಾವನ್ನು ತಂದುಕೊಟ್ಟಿರುವುದಾಗಿ ತನಿಖೆ ಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 8(c), 20(b)(ii)(B) NDPS ACT ರಂತೆ ಪ್ರಕರಣ ದಾಖಲಾಗಿದೆ.

error: No Copying!