Spread the love

ಬೆಂಗಳೂರು: ದಿನಾಂಕ:30-10-2024(ಹಾಯ್ ಉಡುಪಿ ನ್ಯೂಸ್) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಳ್ಳಾರಿ ಕೇಂದ್ರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ನಟ ದರ್ಶನ್ ಗೆ ಇಂದು ಹೈಕೋರ್ಟ್ ನಿಂದ 7 ಷರತ್ತುಗಳುಳ್ಳ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರಾಗಿದೆ .

ಇಂದು ಸಂಜೆ ಹೊತ್ತಿಗೆ  ಕೋರ್ಟ್ ನಿಂದ ರಿಲೀಸ್ ಇಂಟಿಮೇಷನ್ ಬಳ್ಳಾರಿ ಕೇಂದ್ರ ಜೈಲು ಅಧಿಕಾರಿಗಳ ಕೈ ಸೇರಿದೊಡನೆ ನಟ ದರ್ಶನ್ ಅವರನ್ನು ಜೈಲು ಅಧಿಕಾರಿಗಳು ರಿಲೀಸ್ ಮಾಡಲಿದ್ದಾರೆ .

ಬಳ್ಳಾರಿ ಜೈಲಿನಿಂದ ದರ್ಶನ್ ಅವರು ಈಗಾಗಲೇ ಜೈಲಿಗೆ ತಲುಪಿರುವ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಬೆಂಗಳೂರು ನಿವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

error: No Copying!