ಶಿರ್ವಾ: ದಿನಾಂಕ 28/10/2024 (ಹಾಯ್ ಉಡುಪಿ ನ್ಯೂಸ್) ಕುರ್ಕಾಲು ಗ್ರಾಮದ ಹಾಡಿ ಯೊಂದರಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ಶಿರ್ವ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಟಿ ನಾಯ್ಕ್ ಅವರು ದಾಳಿ ನಡೆಸಿ ಒಂಭತ್ತು ಜನರನ್ನು ಬಂಧಿಸಿದ್ದಾರೆ.
ಶಿರ್ವ ಪೊಲೀಸ್ ಠಾಣೆಯ ಶಿವಾನಂದಪ್ಪ ಅವರು ದಿನಾಂಕ: 27-10-2024 ರಂದು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿರುವಾಗ ಪೊಲೀಸ್ ಮಾಹಿತಿದಾರರೋರ್ವರು ವಿಚಾರ ತಿಳಿಸಿ ಕಾಪು ತಾಲೂಕು ಕುರ್ಕಾಲು ಗ್ರಾಮದ ಬಿಳಿಯಾರು ಹಾಡಿ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಎಂಟರಿಂದ ಒಂಭತ್ತು ಜನರು ಸೇರಿ ಹಣವನ್ನು ಪಣವನ್ನಾಗಿ ಇಟ್ಟು ಇಸ್ಪೀಟ್‌ಜುಗಾರಿ ಆಟ ನಡೆಸುತ್ತಿರುವುದಾಗಿ ತಿಳಿಸಿದ್ದು ಈ ಮಾಹಿತಿಯನ್ನು ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ(ತನಿಖೆ) ಅನಿಲ್‌ಕುಮಾರ್ ಟಿ ನಾಯ್ಕ್ ಅವರಿಗೆ ತಿಳಿಸಿದ್ದು ಅವರು ಕೂಡಲೇ ಠಾಣಾ ಸಿಬ್ಬಂದಿಗಳಾದ ಶ್ರೀಧರ್‌ಕೆ ಜೆ, ಎಎಸ್‌ಐ, ಪ್ರಕಾಶ್ ಗುಡಿಗಾರ್, ಮಂಜುನಾಥ, ಶಿವಾನಂದಪ್ಪ, ಬಸನಗೌಡ, ಬಸವರಾಜ, ಸಿದ್ದರಾಯಪ್ಪರವರ ಜೊತೆ ಕಾಪು ತಾಲೂಕು ಕುರ್ಕಾಲು ಗ್ರಾಮದ ಬಿಳಿಯಾರು ಎಂಬಲ್ಲಿನ ಹಾಡಿ ಪ್ರದೇಶದ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತರಾದ 1)ಉದಯ (53) ಕಾಪು ತಾಲೂಕು,ಉಡುಪಿ 2) ಭುಜಂಗ (52) ಮೂಡುಬೆಟ್ಟು ಗ್ರಾಮ, ಕಾಪು ತಾಲೂಕು,ಉಡುಪಿ 3) ಶೇಖರ (65) ಕಾಪು ತಾಲೂಕು, ಉಡುಪಿ 4)ಕಿಟ್ಟ (55) ಕಾಪು ತಾಲೂಕು,ಉಡುಪಿ 5)ಸಂಜೀವ (72) ಕುರ್ಕಾಲು ಗ್ರಾಮ, ಕಾಪು ತಾಲೂಕು,ಉಡುಪಿ 6) ರಮೇಶ (35) ಕಾಪು ತಾಲೂಕು, ಉಡುಪಿ 7) ಸಂಜಯ್ (42) ಮೂಡಬೆಟ್ಟು ಗ್ರಾಮ, ಕಾಪು ತಾಲೂಕು, ಉಡುಪಿ 8) ನಾರಾಯಣ್ (68) ಕಾರ್ಕಳ ತಾಲೂಕು, ಉಡುಪಿ 9)ಮಹಮ್ಮದ್ (63) ಶಂಕರಪುರ ಕಾಪು ತಾಲೂಕು, ಉಡುಪಿ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆಪಾಧಿತರುಗಳು ಕೃತ್ಯಕ್ಕೆ ಬಳಸಿದ್ದ ಒಟ್ಟು ನಗದು ಮೊತ್ತ ರೂಪಾಯಿ 10,760/=, 52 ಇಸ್ಪೀಟು ಎಲೆಗಳು, KA-20 HB-2964 ನೇ ನೊಂದಣಿ ಸಂಖ್ಯೆಯ TVS ಕಂಪೆನಿ ತಯಾರಿಕೆ RADON ಮಾದರಿಯ ಮೋಟಾರ್ ಸೈಕಲ್, KA-20 L-8603 ನೇ ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಕಂಪೆನಿ ತಯಾರಿಕೆ ಸ್ಪ್ಲೆಂಡರ್‌ಮಾದರಿಯ ಮೋಟಾರ್‌ಸೈಕಲ್. KA-20 EK-3034 ನೇ ನೊಂದಣಿ ಸಂಖ್ಯೆಯ TVS ಕಂಪೆನಿ ತಯಾರಿಕೆ XL ಮಾದರಿಯ ಮೊಪೆಡ್‌ವಾಹನಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.