ಉಡುಪಿ: ದಿನಾಂಕ: 25-10-2024(ಹಾಯ್ ಉಡುಪಿ ನ್ಯೂಸ್)
ಉಡುಪಿ ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಕಳೆದ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಗೊಂಡಿರುವ ಕ್ಯಾಪ್ಟನ್ ಶ್ವಾನವನ್ನು ಇಂದು ಪೊಲೀಸ್ ಅಧೀಕ್ಷಕ ರವರು ಜಿಲ್ಲಾ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಪ್ರಶಂಶಿಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಹೊರ ರಾಜ್ಯ ,ಹೊರ ಜಿಲ್ಲೆಗಳಲ್ಲಿ ಸರಿಸುಮಾರು 400 ಕ್ಕೂ ಅಧಿಕ ವಿದ್ವಂಸಕ ಕೃತ್ಯ ತಪಾಸಣೆ ಕಾರ್ಯ ಯಶಸ್ವಿಯಾಗಿ ಪೂರೈಸಿದೆ.ಹೆಸರಿಗೆ ತಕ್ಕ ಹಾಗೆ ಕ್ಯಾಪ್ಟನ್ ಎಂಬ ಗರಿಮೆಯನ್ನು ಪಡೆದುಕೊಂಡು ವಲಯ ಮಟ್ಟದ ಕರ್ತವ್ಯಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು ಇಲಾಖೆಯ ಗೌರವವನ್ನು ಹೆಚ್ಚಿಸಿದೆ.