ಉಡುಪಿ: ದಿನಾಂಕ:25-10-2024 (ಹಾಯ್ ಉಡುಪಿ ನ್ಯೂಸ್)
ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿನ್ನೆ ರಾತ್ರಿ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ.
ನಗರದ ಸಿಟಿ ಬಸ್ ನಿಲ್ದಾಣದ ಐರೋಡಿ ವ್ರತ್ತ, ಸಿಟಿ ಬಸ್ ನಿಲ್ದಾಣದ ಬಳಿಯ ಗೂಡಂಗಡಿಗಳ ಎಡೆಯಲ್ಲಿ ಹಾಗೂ ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಬಹಿರಂಗ ವೈಶ್ಯಾವಾಟಿಕೆ, ಮೈ ಮಾರುವ ದಂಧೆ , ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುವುದು ಇವೆಲ್ಲ ಕಳೆದ ಕೆಲವಾರು ತಿಂಗಳುಗಳಿಂದ ನಡೆಯುತ್ತಿತ್ತು.
ಈ ದಂಧೆ ಯನ್ನು ನಡೆಸಲೆಂದೇ ಗ್ಯಾಂಗ್ ಗಳು ಹುಟ್ಟಿಕೊಂಡಿದ್ದವು. ಎಲ್ಲೆಲ್ಲಿಂದಲೋ ವೈಶ್ಯಾವಾಟಿಕೆ ವ್ರತ್ತಿಗಾಗಿ ಯುವತಿಯರನ್ನು ಕರೆ ತಂದು ರಸ್ತೆ ಬದಿಯಲ್ಲಿ ದುಡಿಸಿ ಕೊಳ್ಳುತ್ತಿದ್ದರು. ರಾಜಾರೋಷವಾಗಿ ನಡೆಯುತ್ತಿದ್ದ ಈ ಮಾನಗೆಟ್ಟ ಸಾರ್ವಜನಿಕ ವರ್ತನೆಗಳನ್ನು ತಡೆಯ ಬೇಕಾದ ಪೊಲೀಸ್ ಇಲಾಖೆ ಮೌನ ತಾಳಿತ್ತು.
ನಗರದಲ್ಲಿ ನಡೆಯುತ್ತಿದ್ದ ಈ ಮಾನಗೆಟ್ಟ ವರ್ತನೆಗಳಿಂದಾಗಿ ಹೆಣ್ಣು ಮಕ್ಕಳು,ಮಹಿಳೆಯರು ತಲೆ ತಗ್ಗಿಸಿ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಶ್ರೀ ಕ್ರಷ್ಣ ದೇವರ ನಗರದಲ್ಲಿ ಇಂತಹ ಮಾನಗೆಟ್ಟ ವರ್ತ ನೆಯನ್ನು ಸಹಿಸಲು ಸಾಧ್ಯವಿಲ್ಲ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಉಡುಪಿ ನಗರದ ಮಾನ ಕಾಪಾಡುವಿರಾ ಎಂದು ಹಾಯ್ ಉಡುಪಿ ಪತ್ರಿಕೆ ಈ ಬಗ್ಗೆ ಅಕ್ಟೋಬರ್ 15 ರ ಸಂಚಿಕೆ ಯಲ್ಲಿ ವರದಿ ಪ್ರಕಟಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿತ್ತು.
ಈ ವರದಿಯಿಂದ ಎಚ್ಚೆತ್ತು ಕೊಂಡ ಉಡುಪಿ ನಗರ ಪೊಲೀಸರು ನಿನ್ನೆ ರಾತ್ರಿ ನಗರದಲ್ಲಿ ಈ ಅಸಭ್ಯ ಚಟುವಟಿಕೆಗಳು ನಡೆಯುತ್ತಿದ್ದ ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೆ ಒಂದು ದಿನ ದಾಳಿ ನಡೆಸಿ ಸುಮ್ಮನೆ ಇರದೆ ಪ್ರತಿ ದಿನ ಪೊಲೀಸರು ಈ ಸ್ಥಳಗಳಲ್ಲಿ ರಾತ್ರಿ ಗಸ್ತು ನಡೆಸಬೇಕು ಹಾಗೂ ಇನ್ನು ಮುಂದೆ ಉಡುಪಿ ನಗರದಲ್ಲಿ ಇಂತಹ ಮಾನಗೆಟ್ಟ ವರ್ತನೆಗಳು ಪುನರಾವರ್ತನೆ ಆಗಬಾರದು ಎನ್ನುತ್ತಾ ಮುಂದೆ ಇಂತಹ ವರ್ತನೆಗಳು ಮುಂದುವರೆದರೆ ಅದು ಪೊಲೀಸ್ ಇಲಾಖೆ ಯ ವೈಫಲ್ಯ ಎನ್ನಲಾಗುವುದು.
ಹಾಯ್ ಉಡುಪಿ ಪತ್ರಿಕೆಯ ವರದಿಯಿಂದ ಎಚ್ಚೆತ್ತು ಕೊಂಡು ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಕೂಡಲೇ ದಾಳಿ ನಡೆಸಿದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಧನ್ಯವಾದಗಳು.