ಕೋಟ: ದಿನಾಂಕ :25-10-2024(ಹಾಯ್ ಉಡುಪಿ ನ್ಯೂಸ್) ಶಿರಿಯಾರ ಗ್ರಾಮದ ಶ್ರೀ ಲಕ್ಷ್ಮೀ ಟ್ರೇಡರ್ಸ್ ಸಂಸ್ಥೆಯ ಉಮೇಶ ಎಂಬವರಿಗೆ ಈರ್ವರು ವ್ಯಕ್ತಿಗಳು ಸೇರಿ ಕೊಂಡು ಪೌಡರ್ ಖರೀದಿ ವಿಚಾರದಲ್ಲಿ 14 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ಬ್ರಹ್ಮಾವರ ,ಶಿರಿಯಾರ ಗ್ರಾಮದ ನಿವಾಸಿ ಉಮೇಶ (48) ಎಂಬವರು “ಶ್ರೀ ಲಕ್ಷ್ಮೀ ಟ್ರೇಡರ್ಸ್” ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು 2 ನೇ ಆರೋಪಿ ಮಹೇಶ್ ಎಂಬಾತನು ಉಮೇಶರವರ ಜೊತೆ ಮಾರ್ಕೇಟಿಂಗ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು 1 ನೇ ಆರೋಪಿ ಸೆಂಥಿಲ್ ಕುಮಾರ್ ನು “ಟೊಪಿಕೊ ಸ್ಟಾರ್ಚ್” ಎಂಬ ಪೌಡರ್ ಅನ್ನು ವಿತರಣೆ ಮಾಡುವ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
1 ನೇ ಆರೋಪಿ ಸೆಂಥಿಲ್ ಕುಮಾರ್ ಹಾಗೂ 2 ನೇ ಆರೋಪಿ ಮಹೇಶ ಇವರು ಇಬ್ಬರೂ ಸ್ನೇಹಿತರಾಗಿದ್ದು 2 ನೇ ಆರೋಪಿ ಮಹೇಶ ನು ಉಮೇಶರವರಿಗೆ “ಟೊಪಿಕೊ ಸ್ಟಾರ್ಚ್” ಪೌಡರ್ ಖರೀದಿ ಮಾಡುವಂತೆ ಹಾಗೂ ಈ ಬಗ್ಗೆ “ತಾನೇ ಗ್ಯಾರಂಟಿ” ಎಂದು ಸುಳ್ಳು ಭರವಸೆ ನೀಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಉಮೇಶರವರು ಒಪ್ಪಿ ದಿನಾಂಕ 08/08/2022 ರಂದು 1 ನೇ ಆರೋಪಿ ಸೆಂಥಿಲ್ ಕುಮಾರ್ ನ ಖಾತೆಗೆ ರೂಪಾಯಿ 13,69,317/- ರೂ ಗಳನ್ನು ವರ್ಗಾಯಿಸಿರುತ್ತಾರೆ ಎಂದಿದ್ದಾರೆ .ನಂತರ 1 ನೇಆರೋಪಿ ಸೆಂಥಿಲ್ ಕುಮಾರ್ ನು ಉಮೇಶ ರವರಿಗೆ ಯಾವುದೇ ತರದ ಪೌಡರ್ ಅನ್ನು ಕಳುಹಿಸಿರುವುದಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಕೇಳಿದರೆ “ನಾಳೆ ಕಳುಹಿಸುತ್ತೇನೆ, ನಾಡಿದ್ದು ಕಳುಹಿಸುತ್ತೇನೆ, ಒಂದು ವಾರದಲ್ಲಿ ಕಳುಹಿಸುತ್ತೇನೆ” ಎಂದು ಹೇಳುತ್ತ ಬಂದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
1 ನೇ ಆರೋಪಿ ಸೆಂಥಿಲ್ ಕುಮಾರ್ ನು ಉಮೇಶ ರವರಿಗೆ ಪೌಡರ್ ಅನ್ನು ಕಳುಹಿಸದೇ ಹಣವನ್ನು ವಾಪಾಸು ನೀಡದೇ ನಂಬಿಸಿ ಮೋಸ ಮಾಡಿದ್ದಾನೆ ಎಂದೂ ಅದಕ್ಕೆ 2 ನೇ ಆರೋಪಿ ಮಹೇಶ ನು ಸಹಕಾರ ನೀಡಿದ್ದಾನೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ
ಉಮೇಶ ರವರು ನೀಡಿದ ಖಾಸಗಿ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 61(2), 318, 318(2) & 318(3) BNS ರಂತೆ ಪ್ರಕರಣ ದಾಖಲಾಗಿದೆ.