- ಶಿರ್ವಾ: ದಿನಾಂಕ 23/10/2024 (ಹಾಯ್ ಉಡುಪಿ ನ್ಯೂಸ್) ಮೂಡುಬೆಳ್ಳೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದಲ್ಲಿಗೆ ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
- ಶಿರ್ವಾ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ದಿನಾಂಕ : 22-10-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡುಬೆಳ್ಳೆ ಗ್ರಾಮದ ಗೂಡುದೊಟ್ಟು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಕೋಳಿಗಳ ಕಾಲಿಗೆ ಹರಿತವಾದ ಬಾಲು ಕಟ್ಟಿ, ಹಣವನ್ನು ಪಣವಾಗಿರಿಸಿಕೊಂಡು, ಅವುಗಳು ಪರಸ್ಪರ ಕಾದಾಟುವಂತೆ ಮಾಡುತ್ತಿದ್ದ 1. ವಿಜಯ್ ಪ್ರಕಾಶ್ ಕ್ವಾಡ್ರಸ್, 2. ಸುರೇಶ್, 3. ಫ್ರಾನ್ಸಿಸ್ ದೀಪಕ್ ಮೆಂಡೋನ್ಸ್, 4. ಪ್ರಜ್ವಲ್ ಜೋಸೆಫ್ ಮಾರ್ಟೀಸ್, 5. ಪ್ರದೀಪ್, 6. ಸಂತೋಷ್, 7.ಸುಜಿತ್ಯ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
- ಸ್ಥಳದಲ್ಲಿ ಇದ್ದ 4 ಜೀವಂತ ಹುಂಜ ಕೋಳಿಗಳು, 2 ಕತ್ತಿ ಬಾಲು, 2 ಬಾಲು ಕಟ್ಟಿದ ಬಟ್ಟೆ, ಪೇಪರ್ ತುಂಡುಗಳು , ನಗದು ಹಣ ರೂಪಾಯಿ 7,850/- ಮತ್ತು ವಾಹನಗಳಾದ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP ACT& 11(1)(a) the prevention of cruelty of animal act ರಂತೆ ಪ್ರಕರಣ ದಾಖಲಾಗಿದೆ.