Spread the love

ಕೊಲ್ಲೂರು’ ದಿನಾಂಕ: 20-10-2024(ಹಾಯ್ ಉಡುಪಿ ನ್ಯೂಸ್) ಕೇರಳ ನಿವಾಸಿ ಸಾಯಿಪ್ರಸನ್ನ ಎಂಬವರ ಚಿನ್ನದ ಆಭರಣಗಳನ್ನು ಕೊಲ್ಲೂರು ಯಾರೋ ಕಳ್ಳರು ಕಳ್ಳತನ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕೇರಳ ರಾಜ್ಯದ ನಿವಾಸಿ ಸಾಯಿಪ್ರಸನ್ನ ಎಂಬವರು ದಿನಾಂಕ 18/10/2024 ರಂದು ಸಂಜೆ  ಕೊಲ್ಲೂರು ಗ್ರಾಮದ ಕೊಲ್ಲೂರಿನ ದೇವಿಕೃಪಾ ಲಾಡ್ಜ್‌‌‌ನಿಂದ ಸಂಬಂಧಿಯಾದ ನಿಕೇತ್‌ ಎಂಬವರ ಮಗಳ ಡಾನ್ಸ್ ಕಾರ್ಯಕ್ರಮ ನೋಡಲು ಹಾಗೂ ಮೂಕಾಂಬಿಕಾ ದೇವರ ದರ್ಶನ ಪಡೆಯಲು, ತಾನು ತಂದಿದ್ದ ಚಿನ್ನದ ಆಭರಣವನ್ನು ಒಂದು ಚಿಕ್ಕ ಪರ್ಸ್‌‌ನಲ್ಲಿ ಹಾಕಿ ಪರ್ಸ್‌‌ನ್ನು ತನ್ನ ಕಂದು ಬಣ್ಣದ ರೆಕ್ಸಿನ್‌‌ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗಿ, ಸಂಜೆ  7:00 ಗಂಟೆಯ ತನಕ ಸ್ವರ್ಣಮುಖಿ ಮಂಟಪದಲ್ಲಿ ಕಾರ್ಯಕ್ರಮ ನೋಡಿ, ಅಲ್ಲಿಂದ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ಕ್ಯೂ ನಲ್ಲಿ ನಿಂತು ದೇವರ ದರ್ಶನ ಮಾಡಿ ನಂತರ ದೇವಸ್ಥಾನದ ಸೇವಾಚೀಟಿ ಕೌಂಟರ್‌ನಲ್ಲಿ ಬ್ಯಾಗ್‌ ಚೆಕ್‌ ಮಾಡಿ ನೋಡಿದಾಗ, ಯಾರೋ ಕಳ್ಳರು ಸಾಯಿಪ್ರಸನ್ನ ಅವರ ರೆಕ್ಸಿನ್‌‌ ಬ್ಯಾಗ್‌‌ನ ಜಿಪ್‌ತೆಗೆದು ಚಿನ್ನದ ಒಡವೆಯಿರುವ ಪರ್ಸ್‌ನ್ನು ಕಳವು ಮಾಡಿರುವುದು ತಿಳಿದು ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 302 (2) ) BNS ರಂತೆ ಪ್ರಕರಣ ದಾಖಲಾಗಿದೆ .

error: No Copying!