ಮಣಿಪಾಲ: ದಿನಾಂಕ 19/10/2024 (ಹಾಯ್ ಉಡುಪಿ ನ್ಯೂಸ್) ಡಿ.ಸಿ ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಯುವಕನನ್ನು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ನಾಗೇಶ ಅವರು ಬಂಧಿಸಿದ್ದಾರೆ
ಮಣಿಪಾಲ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ನಾಗೇಶ ಅವರಿಗೆ ದಿನಾಂಕ:14-10-2024 ರಂದು ಉಡುಪಿ ಡಿ ಸಿ ಆಪೀಸ್ ಬಳಿ ಓರ್ವ ವ್ಯಕ್ತಿ ಅಮಲಿನಲ್ಲಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಪೊಲೀಸರೊಂದಿಗೆ ಸ್ಥಳಕ್ಕೆ ಹೋದಾಗ ಅಲ್ಲಿ ಮೊಹಮ್ಮದ್ ಫರವೇಜ್ ಉಮ್ಮರ್ (25) ಎಂಬಾತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವಂತೆ ಅನುಮಾನಾಸ್ಪದ ವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಪೊಲೀಸರು ಅನುಮಾನದ ಮೇರೆಗೆ ಆತನನ್ನು ಬಂಧಿಸಿ ಮಣಿಪಾಲದ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ದಿನಾಂಕ 18/10/2024 ರಂದು ಮೊಹಮ್ಮದ್ ಫರವೇಜ್ ಉಮ್ಮರ್ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರ ನೀಡಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27 (B) NDPS ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.