- ಕಾರ್ಕಳ: ನಿಟ್ಟೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದವರನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಸಿ ಆನಂದ ಅವರು ಬಂಧಿಸಿದ್ದಾರೆ.
- ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಸಿ ಯವರಾದ ಆನಂದ ಅವರಿಗೆ ದಿನಾಂಕ 18.10.2024 ರಂದು ಮಧ್ಯಾಹ್ನ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಕೆಲವೊಂದು ಜನರು ಕೋಳಿಗಳ ಕಾಲುಗಳಿಗೆ ಬಾಲನ್ನು ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ದಾರರಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.
- ಪೊಲೀಸರು ಕೂಡಲೇ ದಾಳಿ ನಡೆಸಿ ಅಲ್ಲಿ ಕೋಳಿಗಳ ಮೇಲೆ ಹಣವನ್ನು ಕಟ್ಟಿ ಕೋಳಿಗಳ ಕಾಲಿಗೆ ಹಿಂಸಾತ್ಮಕ ರೀತಿಯಲ್ಲಿ ಬಾಲನ್ನು ಕಟ್ಟಿ ಜೂಜಾಟ ಆಡುತ್ತಿದ್ದ ಅಪರಿಚಿತ ಆಪಾದಿತರನ್ನು ಬಂಧಿಸಿದ್ದಾರೆ .
- ಅವರ ವಿರುದ್ದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 87, 93 K.P. Act & U/s 11(1)(n) Prevention of cruelty animals act 1960 ನಂತೆ ಪ್ರಕರಣ ದಾಖಲಾಗಿದೆ.