ಕುಂದಾಪುರ: ದಿನಾಂಕ : 17-10-2024 (ಹಾಯ್ ಉಡುಪಿ ನ್ಯೂಸ್) ಮದ್ಯ ವ್ಯಸನಿ ಕ್ರಿಮಿನಲ್ ಗಂಡನೋರ್ವ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಂಡ್ಳೂರು, ಕಾವ್ರಾಡಿ ಗ್ರಾಮದ ನಿವಾಸಿ ಸನಾ (29) ಎಂಬವರು ನಿಸಾರ್ ಅಹಮ್ಮದ್ ಎಂಬವರನ್ನು ಗುರುಹಿರಿಯರ ನಿಶ್ಚಯದಂತೆ ದಿನಾಂಕ:20-04-2015 ರಂದು ಮದುವೆ ಆಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ನಂತರ ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಗಂಡ ಮಧ್ಯ ವ್ಯಸನಿ ಆಗಿದ್ದು, ಸಿಗರೇಟು ಸೇವನೆ ಮಾಡುತ್ತಿದ್ದನು ಎಂದಿದ್ದಾರೆ. ಮದುವೆಯಾದ ಒಂದು ವಾರದಲ್ಲಿಯೇ ಪ್ರತಿನಿತ್ಯ ಮದ್ಯ ಸೇವಿಸಿಬಂದು ತನಗೆ ಹಿಂಸೆ ನೀಡಲು ಪ್ರಾರಂಬಿಸಿರುತ್ತಾನೆ. ದನ ಕಳವು , ಇನ್ನಿತರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವುದು ತಿಳಿಯಿತು ಎಂದು ಕೊಂಡಿದ್ದಾರೆ. ಆತನು ದುಡಿದ ಹಣವನ್ನು ಕುಡಿದು , ಪಾರ್ಟಿಮಾಡಿ ಖರ್ಚುಮಾಡುತ್ತಿದ್ದನು. ಇದನ್ನು ಆಕ್ಷೇಪಿಸಿದಾಗ ಸನಾರವರಿಗೆ ಬೈದು ಸಿಗರೇಟಿನಿಂದ ಸನಾ ರವರ ಎಡ ಕೈ ತೋಳಿಗೆ ಸುಟ್ಟು ಗಾಯಗೊಳಿಸಿದ್ದು , ನೋವಿನಿಂದ ಕೂಗಿಕೊಂಡಾಗ ಕುತ್ತಿಗೆ ಹಿಡಿದು ಕೂಗಿದರೆ ಸಾಯಿಸುವುದಾಗಿ ಹೆದರಿಸಿದ್ದಾನೆ, ಇನ್ನು ಮುಂದೆ ತನ್ನ ತಂಟೆಗೆ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 118(1) 352, 351(2) (3)ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದೆ.