ಕಾರ್ಕಳ: ದಿನಾಂಕ: 14-10-2024 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಆಸ್ಪತ್ರೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ 11 ಜನರನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸಂದೀಪ ಕುಮಾರ್ ಶೆಟ್ಟಿ ಅವರು ಬಂಧಿಸಿದ್ದಾರೆ.
ದಿನಾಂಕ 13/10/2024 ರಂದು ಬೆಳಿಗ್ಗೆ ಆರೋಪಿಗಳಾದ 1. ಶ್ರೀನಿವಾಸ (50) ಮೂಡಾರು ಗ್ರಾಮ ಕಾರ್ಕಳ ತಾಲೂಕು, 2. ಮಂಜುನಾಥ (30)ಚಂದಾವರ ಗ್ರಾಮ ಕುಮಟಾ ತಾಲೂಕು, 3. ಮುತ್ತಣ್ಣ (21) ಕಸಬಾ ಗ್ರಾಮ ಕಾರ್ಕಳ ತಾಲೂಕು, 4. ಮಂಜುನಾಥ (31) ಕಸಬಾ ಗ್ರಾಮ ಕಾರ್ಕಳ ತಾಲೂಕು, 5. ನಾಗರಾಜ ಉಪ್ಪಾರ (47) ಕಸಬಾ ಗ್ರಾಮ ಕಾರ್ಕಳ ತಾಲೂಕು. 6. ಲಕ್ಷಣ್ ಕಸಬಾ ಗ್ರಾಮ ಕಾರ್ಕಳ ತಾಲೂಕು. 7. ಹೇಮ (60 ) ಕಸಬಾ ಗ್ರಾಮ ಕಾರ್ಕಳ ತಾಲೂಕು, 8. ಹೇಮನ್ ಮಿಯ್ಯಾರು ಗ್ರಾಮ ಕಾರ್ಕಳ ತಾಲೂಕು 9. ಚಿರಂಜೀವಿ ಬೈಪಾಸ ಬಳಿ ಕಸಬಾ ಗ್ರಾಮ ಕಾರ್ಕಳ ತಾಲೂಕು, 10 ಯಮನೂರಪ್ಪ (20) ಕಸಬಾ ಗ್ರಾಮ ಕಾರ್ಕಳ ತಾಲೂಕು. 11 ಮಲ್ಲಯ್ಯ (20) ಆನೆಕೆರೆ ಬೈಪಾಸ ಬಳಿ ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರುಗಳು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎದುರುಗಡೆ ಹೊಸದಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಅಂದರ್ – ಬಾಹರ್ ಎಂಬ ಹೆಸರಿನ ಇಸ್ಪೀಟ್ ಜೂಜಾಟ ಆಡುತ್ತಿದ್ದರು ಎನ್ನಲಾಗಿದೆ,
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸಂದೀಪ ಕುಮಾರ್ ಶೆಟ್ಟಿ ಅವರು ಖಚಿತ ಮಾಹಿತಿಯಂತೆ ದಾಳಿ ನಡೆಯಿಸಿ ಇಸ್ಟೀಟ್ ಜುಗಾರಿ ಆಡುತ್ತಿದ್ದ ವರನ್ನು ಬಂಧಿಸಿ ಅಟಕ್ಕೆ ಬಳಸಿದ ನಗದು ಹಣ 4950/- ರೂ. ಮತ್ತು 52 ಇಸ್ಟೀಟ್ ಎಲೆಗಳು ಹಾಗೂ ನೆಲದ ಮೇಲೆ ಹಾಸಿದ ಹಳೆಯ ದಿನ ಪತ್ರಿಕೆಗಳನ್ನು ಸ್ವಾದೀನಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ.: 87 KP ACT ರಂತೆ ಪ್ರಕರಣ ದಾಖಲಾಗಿದೆ.