ಹೆಬ್ರಿ: ದಿನಾಂಕ: 07-10-2024(ಹಾಯ್ ಉಡುಪಿ ನ್ಯೂಸ್) ಮುಕ್ಕಾಣಿ ರಸ್ತೆಯಲ್ಲಿ ಮರಳು ಕಳ್ಳ ಸಾಗಣೆ ಮಾಡುತ್ತಿದ್ದ 407 ವಾಹನ ಚಾಲಕನನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಟಿ.ಎಂ ಅವರು ಬಂಧಿಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಟಿ.ಎಂ ಅವರು ದಿನಾಂಕ 06/10/2024 ರಂದು ಸಾರ್ವಜನಿಕ ರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಶಿವಪುರ-ಪಡುಕುಡೂರು ರಸ್ತೆಯ ಮುಕ್ಕಾಣಿ ಎಂಬಲ್ಲಿ ಬೆಳಿಗ್ಗೆ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿತ ಸತೀಶ್ ಎಂಬವನು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಪಡುಕುಡೂರು ಗ್ರಾಮದ ಕುಂಜಾಲು ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡಿ ಯಾವುದೇ ಪರವಾನಿಗೆಯನ್ನು ಪಡೆಯದೇ ಲಾಭ ಮಾಡುವ ಉದ್ದೇಶದಿಂದ ಅಕ್ರಮವಾಗಿ KA-20 B-6335 ನೇ 407 ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವಾಗ ಆತನನ್ನು ಬಂಧಿಸಿ ವಾಹನವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 303(2) BNS 4(1A),21(4) MMRD ACTರಂತೆ ಪ್ರಕರಣ ದಾಖಲಾಗಿದೆ.