Spread the love

ಮಲ್ಪೆ: ದಿನಾಂಕ:20-09-2024 (ಹಾಯ್ ಉಡುಪಿ ನ್ಯೂಸ್) ಹೂಡೆ ಪರಿಸರದಲ್ಲಿ ಅಕ್ರಮ ಮರಳು ಕಳ್ಳತನ ನಡೆಸುತ್ತಿದ್ದ ಮೂವರನ್ನು ಮಲ್ಪೆ ಪೊಲೀಸ್‌ ಠಾಣೆಯ ಎಎಸ್ಐ ಯವರಾದ ವಿಜಯ್ ಕೆ ಅವರು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯ ಎಎಸ್ಐಯವರಾದ ವಿಜಯ್ ಕೆ   ಅವರು ದಿನಾಂಕ 19-09-2024   ರಂದು ಬೆಳಿಗ್ಗೆ  ಠಾಣೆಯ  ಹೆಚ್.ಸಿ. ಶಶಿಧರ ಅವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿ   ಹೂಡೆ  ಜಂಕ್ಷನ್ ಬಳಿ ಇರುವಾಗ    ಪಡುತೋನ್ಸೆ  ಗ್ರಾಮದ  ಹೂಡೆ   ಗುಡ್ಡೇರಿ ಕಂಬ್ಲ  ಸುಲೇಮಾನ್  ಎಂಬವರಿಗೆ   ಸಂಬಂದಪಟ್ಟ  ಜಾಗದಲ್ಲಿ  ನಸ್ರುಲ್ಲಾ  ಯಾನೆ ಮುನ್ನಾ, ಮುನೀರ್,  ಪಜೂಲ್  ಎಂಬವರು  ಸೇರಿ ಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳನ್ನು ನದಿಯಿಂದ  ಕಳವು ಮಾಡಿ ತಂದು ರಾಶಿ ಹಾಕಿರುವ  ಬಗ್ಗೆ  ಮಾಹಿತಿದಾರರು ನೀಡಿದ ಖಚಿತ ಮಾಹಿತಿಯಂತೆ  ಎಎಸ್ಐ ಯವರು ಸಿಬ್ಬಂದಿಯವರೊಂದಿಗೆ  ಮಾಹಿತಿ ಬಂದ  ಸ್ಥಳಕ್ಕೆ  ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ  ಗುಡ್ಡೆರಿಕಂಬ್ಲ  ಸುವರ್ಣ ನದಿ ತೀರದಲ್ಲಿ   ಪಶ್ಚಿಮ  ಬದಿಯಲ್ಲಿ  ಇರುವ ಖಾಲಿ ಜಾಗದ ಕಂಪೌಂಡ್  ಗೋಡೆಯ  ಬದಿಯಲ್ಲಿ  ಮರಳನ್ನು  ಶೇಖರಣೆ ಮಾಡಿರುವುದು ಪೊಲೀಸರಿಗೆ  ಕಂಡುಬಂದಿದೆ  ಎನ್ನಲಾಗಿದೆ.  ಅದರಲ್ಲಿ ಸುಮಾರು 2 ಯುನಿಟ್‌ ನಷ್ಟು ಮರಳು   ಇತ್ತೆನ್ನಲಾಗಿದೆ.   ಹೂಡೆ ನಿವಾಸಿಗರಾದ ನಸ್ರುಲ್ಲಾ  ಯಾನೆ ಮುನ್ನಾ, ಮುನೀರ್,  ಮತ್ತು ಪಜೂಲ್  ಎಂಬವರು ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ  ಮಾಡುವ  ಉದ್ದೇಶದಿಂದ ಮರಳನ್ನು ಸುಲೇಮಾನ್ ಎಂಬವರಿಗೆ ಸಂಬಂಧಪಟ್ಟ ಜಾಗದಲ್ಲಿ ರಾಶಿ ಹಾಕಿರುತ್ತಾರೆ ಎಂದು ದೂರು ನೀಡಲಾಗಿದ್ದು ಮರಳನ್ನು  ಸ್ವಾಧೀನ ಪಡಿಸಿಕೊಂಡಿದ್ದಾರೆ.

ಮರಳಿನ  ಮೌಲ್ಯ  ರೂ. 10,000/- ಆಗಿರುತ್ತದೆ ಎನ್ನಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ  ಕಲಂ 303(2)  BNS AND 4,4a,21 MMRD ACT ನಂತೆ ಪ್ರಕರಣ ದಾಖಲಾಗಿದೆ.

error: No Copying!