Spread the love
  • ಉಡುಪಿ: ದಿನಾಂಕ:17/09/2024 (ಹಾಯ್ ಉಡುಪಿ ನ್ಯೂಸ್) ಲಾಡ್ಜಿ಼ಂಗ್  ಒಂದರಲ್ಲಿ ರೂಮ್ ಪಡೆದಿದ್ದ ಇಬ್ಬರು ಯುವಕ, ಯುವತಿಯರು ಲಾಡ್ಜಿಂಗ್ ಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಮಣಿಪಾಲ ನಿವಾಸಿ ವಿದ್ಯಾ (38) ಎಂಬವರಿಗೆ ಸಂಬಂಧಿಸಿದ ಉಡುಪಿ ಹಳೇ ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್‌ಎದುರು ಇರುವ ಹೊಟೇಲ್‌ ಸಿದ್ದಾರ್ಥ ಲಾಡ್ಜಿಂಗ್‌ & ಬಾರ್‌& ರೆಸ್ಟೋರೆಂಟ್‌ ಗೆ ದಿನಾಂಕ:15-09-2024 ರಂದು ಆರೋಪಿಗಳಾದ ಫಯಾಜ್, ಕಿರಣ್,ಮಮತ ,ಶ್ವೇತ ಎಂಬವರು ಬಂದು ರೂಮ್‌ಬಾಯ್‌ ಜೊತೆ ಗಲಾಟೆ ಮಾಡಿ ವಿದ್ಯಾ ರವರಿಗೆ ಮತ್ತು ಅವರ ಗಂಡನಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ವಿದ್ಯಾರವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 352, 351(2), 126(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ. 

error: No Copying!