Spread the love

ಹಿರಿಯಡ್ಕ: ದಿನಾಂಕ 15/09/2024 (ಹಾಯ್ ಉಡುಪಿ ನ್ಯೂಸ್) ಬೆಳ್ಳಂಪಳ್ಳಿ ಗ್ರಾಮದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಆರು ಜನರನ್ನು ಹಿರಿಯಡ್ಕ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ (ಕಾ & ‍ಸು) ಮಂಜುನಾಥ ಮರಬದ ಅವರು ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರಿಗೆ ದಿನಾಂಕ: 13-09-2024 ರಂದು ಬೆಳ್ಳಂಪಳ್ಳಿ ಗ್ರಾಮದ ಭೂತರಾಜ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ಮಾಡಿ 1.ರವೀಂದ್ರ, 2.ಪ್ರಕಾಶ್, 3. ಸುರೇಶ್, 4. ಸೀತಾರಾಮ, 5. ರವಿಕುಮಾರ್, 6. ಮೋಹನ್ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು ಉಳಿದವರು ಓಡಿ ಹೋಗಿರುತ್ತಾರೆ ಎನ್ನಲಾಗಿದೆ.

ಬಂಧಿತ ಆರೋಪಿಗಳ  ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ 4 ಕೋಳಿ ಹುಂಜಗಳು ಹಾಗೂ ಆರೋಪಿಗಳ ಬಳಿ ಇದ್ದ ನಗದು 690/- ರೂಪಾಯಿ ಹಾಗೂ ಕೋಳಿ ಕಾಲುಗಳಿಗೆ ಕಟ್ಟಿದ 2 ಬಾಳು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕಲಂ: 87, 93 KP ACT , 11(1) Prevention of cruelty to animals act ರಂತೆ ಪ್ರಕರಣ ದಾಖಲಾಗಿದೆ.

error: No Copying!