ಕಾಪು: ದಿನಾಂಕ: 08-09-2024(ಹಾಯ್ ಉಡುಪಿ ನ್ಯೂಸ್) ಸಂಪಿಗೆನಗರ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕ ನನ್ನು ಕಾಪು ಪೊಲೀಸ್ ವ್ರತ್ತ ನಿರೀಕ್ಷಕರಾದ ಜಯಶ್ರೀ ಎಸ್ ಮಾನೆ ಅವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಜಯಶ್ರೀ ಎಸ್ ಮಾನೆ ಅವರು ದಿನಾಂಕ: 07/09/2024 ರಂದು ಶಿರ್ವ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಜೀವನ್‌ಮತ್ತು ಜೀಪು ಚಾಲಕ ಪ್ರಸಾದ್‌ರವರೊಂದಿಗೆ ವೃತ್ತ ವ್ಯಾಪ್ತಿಯ ಪಾಂಗಾಳ ಕಡೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ರೊಬ್ಬರು ಅವರಿಗೆ ಕರೆ ಮಾಡಿ ಪಿತ್ರೋಡಿ-ಸಂಪಿಗೆನಗರ ರಸ್ತೆಯಿಂದ ಬಬ್ಬರ್ಯಗುಡ್ಡೆ ಕಡೆಗೆ ಹೋಗುವ ಕ್ರಾಸ್‌ರಸ್ತೆಯಲ್ಲಿರುವ ಬಸ್‌ತಂಗುದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಮದ್ಯದ ಪ್ಯಾಕೇಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ನೀಡಿರುತ್ತಾರೆ ಎನ್ನಲಾಗಿದೆ.
ಕೂಡಲೇ ವ್ರತ್ತ ನಿರೀಕ್ಷಕರು ಸಿಬ್ಬಂದಿ ಯವರೊಂದಿಗೆ ಪಿತ್ರೋಡಿ-ಸಂಪಿಗೆ ನಗರ ರಸ್ತೆಯಿಂದ ಬಬ್ಬರ್ಯಗುಡ್ಡೆ ಕಡೆಗೆ ಹೋಗುವ ಕ್ರಾಸ್‌ರಸ್ತೆ ಬಳಿ ಇರುವ ಬಸ್ ತಂಗು ದಾಣದ ಹತ್ತಿರ ತೆರಳಿದಾಗ ಅಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಮದ್ಯ ಮಾರಾಟ ಮಾಡುತ್ತಿದ್ದು ಪೊಲೀಸರು ಸ್ಥಳಕ್ಕೆ ಹೋಗಿ ದಾಳಿ ಮಾಡಿದಾಗ ಮದ್ಯ ಖರೀದಿಸುತ್ತಿದ್ದ ಗ್ರಾಹಕರು ದೂರದಿಂದ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಕತ್ತಲೆಯಲ್ಲಿ ಓಡಿ ಹೋಗಿರುತ್ತಾರೆ ಎನ್ನಲಾಗಿದೆ .
ವ್ರತ್ತ ನಿರೀಕ್ಷಕರು ಆಟೋ ರಿಕ್ಷಾದಲ್ಲಿದ್ದ ವ್ಯಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು, ಆತನ ಹೆಸರು ವಿಳಾಸ ವಿಚಾರಿಸಿದಾಗ ಆತನು ತನ್ನ ಹೆಸರು ವಿಳಾಸವನ್ನು ದಿಲೀಪ್‌ಕುಮಾರ್, (38) ಸಂಪಿಗೆ ನಗರ, ಉದ್ಯಾವರ ಗ್ರಾಮ, ಉಡುಪಿ ಎಂಬುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ. ಪೊಲೀಸರು ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಆಟೋ ರಿಕ್ಷಾದ ಹಿಂಬದಿಯ ಸೀಟಿನ ಮೇಲೆ ಒಂದು ರಟ್ಟಿನ ಬಾಕ್ಸ್‌ಇರುವುದು ಕಂಡು ಬಂದಿದ್ದು ಆ ಬಾಕ್ಸ್‌ನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಮದ್ಯ ತುಂಬಿದ ಓರಿಜಿನಲ್ ಚೋಯ್ಸ್ ಎಂಬ ಹೆಸರಿನ ಟೆಟ್ರಾ ಪ್ಯಾಕ್‌ಗಳು ಇರುವುದು ಕಂಡು ಬಂದಿದ್ದು , ಆತನು ತನ್ನಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಯಾವುದೇ ಪರವಾನಿಗೆ ಇರುವುದಿಲ್ಲವೆಂದೂ ಮತ್ತು ಈ ದಿನ ಉಡುಪಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಇರುವುದರಿಂದ ತಾನು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಉಡುಪಿಯ ಬಲಾಯಿಪಾದೆಯಲ್ಲಿರುವ ಉಡುಪಿ ಲಿಕ್ಕರ್‌ಹೌಸ್‌ಎಂಬ ಹೆಸರಿನ ಮದ್ಯ ದ ಅಂಗಡಿಯಿಂದ ತಲಾ 12 ಟೆಟ್ರಾಪ್ಯಾಕ್‌ನಂತೆ ಒಟ್ಟು 48 ಟೆಟ್ರಾಪ್ಯಾಕೇಟ್‌ಗಳನ್ನು ಖರೀದಿಸಿ ಅವುಗಳನ್ನು ತನ್ನ ಆಟೋ ರಿಕ್ಷಾದಲ್ಲಿ ಇರಿಸಿಕೊಂಡಿದ್ದು ಅವುಗಳನ್ನು ಇಲ್ಲಿಗೆ ತಂದು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದು, ಅವುಗಳ ಪೈಕಿ 18 ಟೆಟ್ರಾ ಪ್ಯಾಕೇಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.
ಆತನ ಅಂಗಿಯ ಜೇಬಿನಲ್ಲಿ ಹಣ ಇದ್ದು, ಆ ಹಣದ ಬಗ್ಗೆ ಪೊಲೀಸರು ವಿಚಾರಿಸಿದಾಗ ಮದ್ಯ ಮಾರಾಟ ಮಾಡಿದ ಹಣ ಎಂದು ತಿಳಿಸಿರುತ್ತಾನೆ ಎನ್ನಲಾಗಿದೆ. ಆತನ ಕಿಸೆಯಲ್ಲಿದ್ದ ರೂಪಾಯಿ 4430/- ,ಒಂದು ಮೊಬೈಲ್ ಫೋನ್ ದೊರೆತಿದ್ದು, OPPO ಕಂಪನಿಯ CPH2015 ಮಾಡೆಲ್‌ನ ಮೊಬೈಲ್ ಫೋನ್‌ಆಗಿದ್ದು, ಮೊಬೈಲ್‌ನ ಅಂದಾಜು ಮೌಲ್ಯ 4000/- ರೂ ಆಗಬಹುದು. ಆರೋಪಿತನ ಆಟೋ ರಿಕ್ಷಾ KA-20-AB-1494 ನೇ ನಂಬ್ರದ PIAGGIO Appe ಕಂಪನಿಯ ಹಳದಿ ಮತ್ತು ಕಪ್ಪು ಬಣ್ಣದ ಆಟೋ ರಿಕ್ಷಾ ಆಗಿದ್ದು ಅದರ ಅಂದಾಜು ಮೌಲ್ಯ ರೂ 80,000/-ರೂ ಆಗಬಹುದು ಎನ್ನಲಾಗಿದೆ. ಆರೋಪಿತ ರಿಕ್ಷಾ ಚಾಲಕನ ವಶದಲ್ಲಿದ್ದ ಸ್ವತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 32,34 K.E act ರಂತೆ ಪ್ರಕರಣ ದಾಖಲಾಗಿದೆ.