Spread the love

ಪಡುಬಿದ್ರಿ: ದಿನಾಂಕ:04-09-2024 (ಹಾಯ್ ಉಡುಪಿ ನ್ಯೂಸ್) ಬ್ಯೂಟಿ ಪಾರ್ಲರ್ ಮಾಲಕಿಯೋರ್ವರಿಗೆ ಪರಿಚಯಗೊಂಡ ಮಹಿಳೆಯೋರ್ವರು 4 ಲಕ್ಷ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ಪಡುಬಿದ್ರಿ ,ನಡ್ಸಾಲು ಗ್ರಾಮದ ನಿವಾಸಿ ಮಮತಾ (46). ಇವರು ಮೂಲ್ಕಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸಿಕೊಂಡು ಬರುತ್ತಿದ್ದು, ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸರೋಜ ಎಂಬವರ ಸ್ನೇಹಿತೆ ಹಿರಿಯಡ್ಕ ವಾಸಿ ಆಪಾದಿತೆ ಸೌಮ್ಯಾ ಎಂಬವರ ಪರಿಚಯವಾಗಿ ಸೌಮ್ಯರವರು ಮಮತಾರವರ  ಬಳಿ ಬಂದು ತಾನು ಬಹಳ ಕಷ್ಟದಲ್ಲಿ ಇದ್ದೇನೆ ಎಂದು ತನ್ನ ದುಖ: ವನ್ನು ಹೇಳಿ ನಂಬಿಸಿ ರೂಪಾಯಿ 4,00,000/- ಕೇಳಿದ್ದು, ಮಮತರವರು ತನ್ನಲ್ಲಿ ಅಷ್ಟು ಹಣ ಇಲ್ಲ ಎಂದಾಗ ಸ್ವಲ್ಪ ನಗದು ಮತ್ತು ನಿಮ್ಮಲ್ಲಿರುವ ಚಿನ್ನವನ್ನು ಕೊಡುವಂತೆ ಆ ದಿನ ಹಾಗೂ ನಂತರದ ದಿನಗಳಲ್ಲಿ ಪದೇ ಪದೇ ಕೇಳುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

. ದಿನಾಂಕ 25/07/2023 ರಂದು ಕೂಡಾ ಅವಳು ಕೇಳಿದಾಗ ಮಮತಾರವರು  ಮಾನವೀಯತೆಯ ದೃಷ್ಟಿಯಿಂದ ಆಕೆಯನ್ನು ನಂಬಿ ತನ್ನಲ್ಲಿದ್ದ ರೂಪಾಯಿ 1,50,000/-, 80 ಗ್ರಾಂ ತೂಕದ ಚಿನ್ನದ ನಕ್ಲೆಸ್‌, 2 ಉಂಗುರ, ಒಂದು ಸರ ಎರಡು ಪೆಂಡೆಂಟ್‌, ಮೂರು ಜೊತೆ ಕಿವಿಯೋಲೆ ಯನ್ನು ಆಪಾದಿತೆಗೆ ಪಡುಬಿದ್ರೆಯ ಎಕ್ಸ್‌ಪ್ರೆಸ್‌ ಬಸ್ಸು ನಿಲ್ದಾಣದ ಬಳಿ ಅದೇ ದಿನ  ತನ್ನ ಪರಿಚಯದ ಸಾಕ್ಷಿ ರವಿಕುಮಾರ್‌ ಎ.ಎಸ್‌. ಮತ್ತು ಚೈತ್ರಾರವರ ಸಮಕ್ಷಮದಲ್ಲಿ ನೀಡಿದ್ದು ಆದಷ್ಟು ಬೇಗ ವಾಪಾಸು ಕೊಡುವಂತೆ ತಿಳಿಸಿದಾಗ ಅದಕ್ಕೆ ಆಪಾದಿತೆ ಸೌಮ್ಯಳು ಚಿನ್ನಾಭರಣ ಮತ್ತು ಹಣವನ್ನು 1 ತಿಂಗಳ ಒಳಗಾಗಿ ವಾಪಾಸು ನೀಡುವುದಾಗಿ ಹೇಳಿರುತ್ತಾಳೆ ಎಂದು ದೂರಿದ್ದಾರೆ.

ಆದರೆ ಆಪಾದಿತೆ ಸೌಮ್ಯಳು ಒಂದು ತಿಂಗಳಾದರೂ ಚಿನ್ನಾಭರಣ ಮತ್ತು ಹಣವನ್ನು ವಾಪಾಸು ನೀಡದೇ ಹಣ ಮತ್ತು ಚಿನ್ನವನ್ನು ವಾಪಾಸು ನೀಡುವಂತೆ ಪದೇ ಪದೇ ವಿನಂತಿಸಿಕೊಂಡರೂ ವಾಪಾಸು ಕೊಡದೆ ಇದ್ದು ವಿಚಾರಿಸಿದಾಗ ಆಪಾದಿತೆ ಸೌಮ್ಯಳು  ಚಿನ್ನಾಭರಣವನ್ನು ತಾನು ಉಡುಪಿಯ ಸರ್ವೀಸ್‌ ಬಸ್‌ ನಿಲ್ದಾಣದ ಬಳಿ ಇರುವ ಪ್ಲವರ್‌ ಮಾರ್ಕೇಟಿನ ಎದುರು ಗ್ಯಾಸ್‌ಲ್ಯಾಂಡ್‌ ಶೋಪ್‌ ನಂಬ್ರ G03 ಸುಧೀಂದ್ರ ಪೈನಾನ್ಸ್ ಕಾರ್ಪೋರೇಶನ್‌(ರಿ) ರಲ್ಲಿ ತನ್ನದ್ದೆಂದು ಹೇಳಿ ಅಡವಿಟ್ಟು ರೂಪಾಯಿ 3,51,900/ ಸಾಲ ಪಡೆದುಕೊಂಡಿರುವುದಾಗಿ ತಿಳಿಸಿದ್ದು ನಂತರ ಹಲವಾರು ಬಾರಿ  ಚಿನ್ನಾಭರಣಗಳನ್ನು ಬಿಡಿಸಿ ಕೊಡುವಂತೆ ತಿಳಿಸಿದಾಗ ಆಪಾದಿತೆ ಸೌಮ್ಯಳು ಮಮತರವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಮತರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 316(2), 318(4), 351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!