ಕೋಟ: ದಿನಾಂಕ:03-09-2024 (ಹಾಯ್ ಉಡುಪಿ ನ್ಯೂಸ್) ಬೇಳೂರು ಗ್ರಾಮದ ಕಲ್ಮಂಡೆಯ ಮನೆಯೊಂದರ ಹಿಂಬದಿಯ ಶೆಡ್ ನಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದಲ್ಲಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ತೇಜಸ್ವಿ ಯವರು ದಾಳಿ ನಡೆಸಿ ಹತ್ತು ಜನರನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ತೇಜಸ್ವಿ ಯವರಿಗೆ ದಿನಾಂಕ: 02-09-2024 ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಮಾಹಿತಿ ಮತ್ತು ಆದೇಶದ ಮೇರೆಗೆ, ಕುಂದಾಪುರ ತಾಲೂಕು ಬೇಳೂರು ಗ್ರಾಮದ ಕಲ್ಮಂಡೆ ನಿವಾಸಿ ಪ್ರತಾಪ್ ಶೆಟ್ಟಿ ಎಂಬವರ ಮನೆಯ ಹಿಂಬದಿಯ ತೆರೆದ ಶೆಡ್‌ನಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಹೊಂದದೇ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಅಡ್ಡೆ ನಡೆಯುತ್ತಿದ್ದಲ್ಲಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ, ಅಲ್ಲಿ ಇಸ್ಟೀಟು ಜುಗಾರಿ ಆಟ ಆಡುತ್ತಿದ್ದ 1)ಹಂಸ ಬ್ಯಾರಿ, 2) ಮಧುಕರ 3) ಚೇತನ್ 4) ಜಯ ಪ್ರಕಾಶ್, 5) ಶ್ರೀರಾಜ್ 6) ಮಂಜುನಾಥ, 7) ಸುಬ್ಬಣ್ಣ 8) ಅಶೋಕ , 9) ಬಿ.ನರಸಿಂಹ 10) ಸೂರ ಎಂಬವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಊರಿನ ಪರಿಚಯದವರಾದ ಪ್ರತಾಪ್ ಎಂಬವರು ತನ್ನ ಮನೆಯ ಹಿಂಬದಿಯ ಶೆಡ್ ನಲ್ಲಿ ಮನೋರಂಜನೆಗಾಗಿ ಇಸ್ಪೀಟ್ ಜುಗಾರಿ ಆಡುವುದಾಗಿಯೂ ನಮ್ಮ ಮನೆ ಪೊಲೀಸ್ ಠಾಣೆಯಿಂದ ಸುಮಾರು ದೂರ ಇದ್ದು, ಇಲ್ಲಿಗೆ ಯಾರೂ ರೈಡ್ ಮಾಡಲು ಬರುವುದಿಲ್ಲವೆಂದು ಹೇಳಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದುದಾಗಿ ನುಡಿದಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಂದ ಇಸ್ಟೀಟು ಜುಗಾರಿ ಆಟದ ಬಗ್ಗೆ ಉಪಯೋಗಿಸಿದ ನಗದು 23,700/-, ಇಸ್ಟೀಟು ಎಲೆ-159, 10 ಮೊಬೈಲ್ ಪೋನ್‌ಗಳು, ರೌಂಡ್ ಟೇಬಲ್-̧1 , 10 ಪ್ಲಾಸ್ಟಿಕ್ ಚಯರ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ U/s 87 KP Act ರಂತೆ ಪ್ರಕರಣ ದಾಖಲಾಗಿದೆ.