Spread the love

ಪಡುಬಿದ್ರಿ: ದಿನಾಂಕ 02-09-2024(ಹಾಯ್ ಉಡುಪಿ ನ್ಯೂಸ್)

ಸಮಾನತೆಯನ್ನು ಬೋಧಿಸಿ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳನ್ನು ನಂಬುವ ಕುಲದವರಿಂದಲೇ ನಾರಾಯಣಗುರುಗಳಿಗೆ ಮತ್ತು ಮಹಿಳೆಯೋರ್ವರಿಗೆ ಅವಮಾನವಾದ ಘಟನೆ ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿಯಲ್ಲಿ ನಡೆದಿದೆ ಎನ್ನಲಾಗಿದೆ.

ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಮೀಟಿಂಗ್ನಲ್ಲಿ ಅಶ್ವಜಿತ್ ಎನ್ನುವ ವ್ಯಕ್ತಿ, ಬಿಲ್ಲವ ಸಮಾಜದ ಮಹಿಳೆಯೋರ್ವರ ಘನತೆಗೆ ಧಕ್ಕೆ ತಂದ ವಿಷಯಕ್ಕೆ ಸಂಬಂಧಿಸಿ ಹಿಂದಿನ ಅಧ್ಯಕ್ಷರ ಕ್ಷಮೆಯಾಚನೆಗೆ ಲೋಕೇಶ್ ಪೂಜಾರಿ ಎಂಬವರು ಮುಂದಾದಲ್ಲಿ ಆಗಸ್ಟ್ 20 ರಂದು ನಡೆಯುವ ನಾರಾಯಣ ಗುರುಜಯಂತಿ ಆಚರಣೆಯ ಕಾರ್ಯಕ್ರಮಕ್ಕೆ ಹೆಜಮಾಡಿ ಬಿಲ್ಲವ ಮಹಿಳೆಯರು ಯಾರೂ ಬರುವುದಿಲ್ಲ ಎಂದು ಹೇಳುವ ಮೂಲಕ ನಾರಾಯಣ ಗುರುಗಳಿಗೆ ಅಗೌರವ ತೋರಿ, ಅಸಂಖ್ಯಾತ ಗುರುಗಳ ಅನುಯಾಯಿಗಳೂ ಸೇರಿದಂತೆ ಬಿಲ್ಲವ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಇದೀಗ ಬಿಲ್ಲವ ಸಮಾಜದ ಪ್ರಮುಖರು ಪ್ರಕರಣ ದಾಖಲು ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಲ್ಲವ ಸಮಾಜದ ಸಂಘಟನೆಗಳಿಗೂ ಮನವಿ ನೀಡಲಾಗಿದೆ ಎನ್ನಲಾಗಿದೆ.

ಹೆಜಮಾಡಿ ಸಂಘದ ಮಾಜಿ ಅಧ್ಯಕ್ಷನ ಕುಮ್ಮಕ್ಕಿನಿಂದ ವ್ಯಕ್ತಿಯೊಬ್ಬರು ಗ್ರಾಮದ ಮಹಿಳೆಯೋರ್ವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಸಭೆಯಲ್ಲಿಯೂ ಅನುಚಿತ ವರ್ತನೆಯನ್ನು ಮಾಜಿ ಅಧ್ಯಕ್ಷರ ಗಮನಕ್ಕೆ ತಂದು ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಬೇಡಿಕೊಂಡರೂ ,ಯಾವುದೇ ಸಹಕಾರ ದೊರೆಯದ ಕಾರಣ ಸಂತ್ರಸ್ತೆ ಮಹಾಸಭೆಗೆ ಬಂದು ನ್ಯಾಯ ಕೇಳುತ್ತೇನೆ ಎಂದಾಗ ಮಾಜಿ ಅಧ್ಯಕ್ಷ ಸಂತ್ರಸ್ತೆಗೆ ಬರಲಿ; ಬಂದರೆ ಚಪ್ಪಲಿ, ಹಿಡಿಸೂಡಿ ಪೂಜೆ ಮಾಡುತ್ತೇನೆ ಎಂದರೂ ಸಹ, ಸಂತ್ರಸ್ತೆ ಮಹಾಸಭೆಗೆ ಬಂದು ನ್ಯಾಯ ಕೇಳಿದಾಗ ಅವಳನ್ನೇ ತಪ್ಪಿತಸ್ಥೆ ಎನ್ನುವ ರೀತಿಯಲ್ಲಿ ನಡೆಸಿ ಕೊಳ್ಳಲಾಯಿತು ಎನ್ನಲಾಗಿದೆ. ನಾರಾಯಣಗುರುಗಳ ಅನುಯಾಯಿಗಳೆಂದು ಫೋಸ್ ನೀಡುವ ಇಲ್ಲಿನ ಕಮಿಟಿಯ ಯಾವೊಬ್ಬ ಸದಸ್ಯನೂ ಧ್ವನಿ ಎತ್ತದೆ ಆ ಮಹಿಳೆಯ ಈ ಸ್ಥಿತಿ ಮತ್ತು ಮಾಜಿ ಅಧ್ಯಕ್ಷನ ಬಗ್ಗೆ ಗ್ರಾಮದ ಓರ್ವ ವ್ಯಕ್ತಿ ಬಿಲ್ಲವ ಸಮಾಜದ ಚಿಂತಕ, ಪತ್ರಕರ್ತ ಕಿರಣ್ ಪೂಜಾರಿಯವರ ಗಮನಕ್ಕೆ ತಂದಾಗ ಅವರು ಇದರ ಬಗ್ಗೆ ಹೆಜಮಾಡಿ ಸಾರ್ವಜನಿಕರಲ್ಲಿ ವಿಚಾರಿಸಿದಾಗ ಸತ್ಯಾಂಶ ಬಯಲಾಗಿದ್ದು, ಈ ಬಗ್ಗೆ ಬಿಲ್ಲವ ಸಂಘದ ಹಾಲಿ ಅಧ್ಯಕ್ಷರನ್ನು ಕಿರಣ್ ಪೂಜಾರಿ ಅವರು ವಿಚಾರಿಸಿದಾಗ ತಪ್ಪು ಆಗಿರುವುದು ಹೌದು ಎಂದು ಒಪ್ಪಿಕೊಂಡು ಗುರುಜಯಂತಿ ನಂತರ ಸಂತ್ರಸ್ತೆಗೆ ನ್ಯಾಯ ಕೊಡಿಸುತ್ತೇನೆ ಎನ್ನುವ ಭರವಸೆ ನೀಡಿದ್ದರು ಎನ್ನಲಾಗಿದೆ.

ತದನಂತರ ಮುಂಬೈ ಕಮಿಟಿಯಲ್ಲಿ ಹಲವಾರು ವಿಷಯಗಳ ವಿಚಾರ ನಡೆದಾಗ ಸಂತ್ರಸ್ತೆ ಜೊತೆಗೆ ಅನುಚಿತ ವರ್ತನೆ ಮಾಡಿದ ವ್ಯಕ್ತಿ ಕ್ಷಮೆಯಾಚಿಸಲು ತಯಾರಿದ್ದಾರೆ, ಹಾಗೇ ಮಾಜಿ ಅಧ್ಯಕ್ಷರು ಸಹ ಕ್ಷಮೆ ಕೇಳಬೇಕು ಎಂದು ಪ್ರಸ್ತಾವನೆ ಬಂದಾಗ ಅಶ್ವಜಿತ್ ರವರು ಬಿಲ್ಲವ ಸಮಾಜದ ಮಹಿಳೆಯ ಘನತೆಗೆ ಧಕ್ಕೆ ತಂದ ವಿಷಯಕ್ಕೆ ಸಂಬಂಧಿಸಿ ಹಿಂದಿನ ಅಧ್ಯಕ್ಷರ ಕ್ಷಮೆಯಾಚನೆಗೆ ಲೋಕೇಶ್ ಪೂಜಾರಿಯವರು ಮುಂದಾದಲ್ಲಿ ಆಗಸ್ಟ್ 20 ರಂದು ನಡೆಯುವ ನಾರಾಯಣ ಗುರುಜಯಂತಿ ಆಚರಣೆಯ ಕಾರ್ಯಕ್ರಮಕ್ಕೆ ಹೆಜಮಾಡಿ ಬಿಲ್ಲವ ಮಹಿಳೆಯರು ಯಾರೂ ಬರುವುದಿಲ್ಲ ಎಂದಿರುತ್ತಾರೆ ಎನ್ನಲಾಗಿದೆ. ಅಶ್ವಜಿತ್ ಪ್ರಕಾರ ಲೋಕೇಶ್ ಪೂಜಾರಿ ಎನ್ನುವ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗಿಂತ ದೊಡ್ಡವನೇ? ಅವನಿಗೋಸ್ಕರ ಬಿಲ್ಲವ ಮಹಿಳೆಯರು ಬರುತ್ತಾರೆಯೇ? ಹೆಜಮಾಡಿ ಬಿಲ್ಲವ ಮಹಿಳೆಯರು ಯಾವಾಗ ಅಶ್ವಜಿತ್ ರವರಿಗೆ ಈ ರೀತಿಯಾಗಿ ತಿಳಿಸಿದ್ದಾರೆ? ಈ ರೀತಿಯ ಹೇಳಿಕೆ ನೀಡಿ ಮಹಿಳೆಯರಿಗೆ ಅವಮಾನ ಮಾಡಿದ್ದು ಎಷ್ಟು ಸರಿ? ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅಗೌರವ ತೋರಿಸಿದ್ದು ಎಷ್ಟು ಸರಿ? ಎನ್ನುವುದು ಪ್ರಸ್ತುತ ವಾದವಾಗಿದೆ.

ಗುರು ಜಯಂತಿಯ ಬಳಿಕ ಸಂತ್ರಸ್ತೆಯ ಜೊತೆಗೆ ಅನುಚಿತವಾಗಿ ನಡೆದುಕೊಂಡ ವ್ಯಕ್ತಿ ಸಂತ್ರಸ್ತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಆದರೆ ಮಾಜಿ ಅಧ್ಯಕ್ಷ ಮತ್ತು ಅಶ್ವಜಿತ್ ರವರು ನಾವು ನಡೆದುಕೊಂಡಿದ್ದೆ ಸರಿ ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ಮುಗಿಯುತ್ತಿದೆ ಎನ್ನುವಷ್ಟರಲ್ಲಿ ಈ ಬಗ್ಗೆ ಮೊದಲು ಹೌದು ಮುಂಬೈಯಲ್ಲಿ ಆ ರೀತಿ ಮಾತು ಬಂದಿದ್ದು ಹೌದು ಅಶ್ವಜಿತ್ ಗುರುಗಳಿಗೆ ಕ್ಷಮೆ ಕೇಳುತ್ತಾರೆ ಎಂದು ಹಾಲಿ ಅಧ್ಯಕ್ಷರು ತಪ್ಪು ಒಪ್ಪಿಕೊಂಡು ಅದು ಸರಿ ಮಾಡುತ್ತೇನೆ ಎಂದು ಮರುದಿನ ಸಂಜೆ ಕರೆ ಮಾಡಿ ಅವರು ಸ್ವಗ್ರಹದಲ್ಲೇ ಕ್ಷಮೆ ಯಾಚಿಸಿದ್ದಾರೆ ಎಂದು ಕಿರಣ್ ಪೂಜಾರಿಯವರಿಗೆ ತಿಳಿಸಿದರು ಎನ್ನಲಾಗಿದೆ. ನಾನು ಇಮೇಲ್ ಅಲ್ಲಿ ಕಳುಹಿಸಿದ ಮನವಿಗೆ ನೀವು ನನ್ನಲ್ಲಿ ಫೋನ್ ನಲ್ಲಿ ಹೇಳಿದಂತೆ ಉತ್ತರ ನೀಡಿ ಎಂದಾಗ, ಅಧ್ಯಕ್ಷ ತದನಂತರ ಇಂತಹ ಘಟನೆ ಮೀಟಿಂಗ್ನಲ್ಲಿ ನಡೆದಿಲ್ಲ ಎಂದು ಸಂಸ್ಥೆಯ ಲೆಟರ್ ಹೆಡ್ ಮೂಲಕ ಸ್ಪಷ್ಟನೆ ನೀಡಿ ಯು ಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ .ಹಾಗಿದ್ದರೆ ಬಿಲ್ಲವ ಸಂಘಟನೆ ಮತ್ತು ಕಿರಣ್ ಪೂಜಾರಿಯವರಲ್ಲಿ  ಕ್ಷಮೆ ಕೇಳಿದ್ದಾರೆ ಎಂದಿದ್ದು ಹಾಗಾದರೆ ಸುಳ್ಳೇ?

ತುರ್ತಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ಕ್ಷಮೆಯಾಚಿಸಿ ತಪ್ಪು ಕಾಣಿಕೆಯನ್ನು ಹಾಕಬೇಕು. ಹಾಗೇ ಹೆಜಮಾಡಿ ಬಿಲ್ಲವ ಸಮುದಾಯದ ಸಮಸ್ತ ಬಿಲ್ಲವ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಕಿರಣ್ ಪೂಜಾರಿ ತಿಳಿಸಿದ್ದಾರೆ.

error: No Copying!