- ಮಲ್ಪೆ: ದಿನಾಂಕ:01-09-2024 (ಹಾಯ್ ಉಡುಪಿ ನ್ಯೂಸ್) ಬಾರ್ ಒಂದರಲ್ಲಿ ಕುಡಿಯುತ್ತಿದ್ದ ವ್ಯಕ್ತಿ ಯೋರ್ವರಿಗೆ ಇನ್ನೋರ್ವ ವ್ಯಕ್ತಿ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
- ಉಡುಪಿ, ಕಿನ್ನಿಮುಲ್ಕಿ ನಿವಾಸಿ ಪ್ರಶಾಂತ್ (41) ಎಂಬವರು ದಿನಾಂಕ 19/08/2024 ರಂದು ರಾತ್ರಿ ಕಡೆಕಾರಿನ ಕನ್ನರ್ಪಾಡಿ ಗ್ರಾಮದ ಕಿನ್ನಿಮುಲ್ಕಿ ಬಳಿಯ ಹಿರೇನ್ ಬಾರ್ ಗೆ ಕುಡಿಯಲು ಹೋಗಿದ್ದು, ಆ ಸಮಯ ಆಪಾದಿತ ರಾಘವೇಂದ್ರ ಎಂಬಾತ ಪ್ರಶಾಂತರವರ ಹತ್ತಿರದ ಟೇಬಲ್ ನಲ್ಲಿ ಬಂದು ಕುಳಿತಿದ್ದು, ಪ್ರಶಾಂತರವರು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಆಪಾದಿತ ರಾಘವೇಂದ್ರ ನು ಪ್ರಶಾಂತರವರು ಗಟ್ಟಿಯಾಗಿ ಮಾತನಾಡುತ್ತಿದ್ದ ಕಾರಣಕ್ಕೆ ಪ್ರಶಾಂತರವರು ಹಾಗೂ ಆತನ ಸ್ನೇಹಿತರು ಕುಳಿತಿದ್ದ ಟೇಬಲ್ ಹತ್ತಿರ ಬಂದು ಪ್ರಶಾಂತ ರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈಯ್ದು ಅಲ್ಲೇ ಇದ್ದ ಬಿಯರ್ ಬಾಟಲಿಯಿಂದ ಪ್ರಶಾಂತ ರವರ ತಲೆಗೆ ಹೊಡೆದ ಕಾರಣ ಪ್ರಶಾಂತರವರು ಅಲ್ಲೇ ಕೆಳಗೆ ಬಿದ್ದಿದ್ದು, ಆಪಾದಿತ ರಾಘವೇಂದ್ರನು ಅಲ್ಲಿಂದ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಪ್ರಶಾಂತ್ ರವರು ರಾತ್ರಿ ಚಿಕಿತ್ಸೆ ಬಗ್ಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ರವರ ಚಿಕಿತ್ಸೆಯ ವೆಚ್ಚವನ್ನು ಆಪಾದಿತ ರಾಘವೇಂದ್ರ ನು ಭರಿಸುವುದಾಗಿ ಮೊದಲು ತಿಳಿಸಿದ್ದು, ಈಗ ಭರಿಸದೇ ಇರುವ ಕಾರಣ ತಡವಾಗಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
- ಪ್ರಶಾಂತ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:118(1), 352 BNS ರಂತೆ ಪ್ರಕರಣ ದಾಖಲಾಗಿದೆ.