Spread the love

ಗಂಗೊಳ್ಳಿ : ದಿನಾಂಕ:29-08-2024 ( ಹಾಯ್ ಉಡುಪಿ ನ್ಯೂಸ್) ಕೋಳೂರು ಕ್ರಾಸ್ ಎಂಬಲ್ಲಿಯ ಕ್ರಶರ್ ಬಳಿಯ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಬಸವರಾಜ ಕನಶೆಟ್ಟಿ ಅವರು ಬಂಧಿಸಿದ್ದಾರೆ.

ಗಂಗೊಳ್ಳಿ ಠಾಣಾ ಪಿಎಸ್‌ಐಯವರಾದ ಬಸವರಾಜ ಕನಶೆಟ್ಟಿರವರು ದಿನಾಂಕ:28-08-2024 ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್‌ ಎಂಬಲ್ಲಿನ ಯುನಿಟಿ ಕ್ರಶರ್‌ ಬಳಿಯ ಸರ್ಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವುದಾಗಿ ಸಾರ್ವಜನಿಕರು ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ದೊರೆತೊಡನೆ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ  ದಾಳಿ ನಡೆಸಿ ಆಪಾದಿತರಾದ ಪ್ರವೀಣ (35) ಕುಂದಬಾರಂದಾಡಿ ಗ್ರಾಮ ,ಮಹಾದೇವ (49) ಕುಂದಬಾರಂದಾಡಿ ಗ್ರಾಮ ,ಸುಧಾಕರ (38) ಕುಂದಬಾರಂದಾಡಿ ಗ್ರಾಮ, ಪ್ರಶಾಂತ್‌ (36) ಕುಂದಬಾರಂದಾಡಿ ಗ್ರಾಮ, ಬಾಲ ( 58) ಕುಂದಬಾರಂದಾಡಿ ಗ್ರಾಮ ,ದಿನೇಶ್‌ (29) ಕುಂದಬಾರಂದಾಡಿ ಗ್ರಾಮ , ವಿಕ್ರಮ (27) ನಾರ್ಕಳಿ , ಹರ್ಕೂರು ಗ್ರಾಮ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆಪಾದಿತರಿಂದ ನಗದು 8360/- ರೂ, ವಿವಿಧ ಜಾತಿಯ ಇಸ್ಪೀಟ್ ಎಲೆಗಳು 52, ಹಾಗೂ ನೆಲಕ್ಕೆ ಹಾಸಿದ ಮಾಸಿದ ಬಣ್ಣದ ಪ್ಲಾಸ್ಟಿಕ್‌ ಶೀಟ್‌-1 ನ್ನು  ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ  ಕಲಂ 87ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

error: No Copying!