ಮಣಿಪಾಲ: ದಿನಾಂಕ: 22/08/2024 (ಹಾಯ್ ಉಡುಪಿ ನ್ಯೂಸ್) ಕಾಯಿನ್ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನೋರ್ವನನ್ನು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೀನ ಸಾಲ್ಯಾನ್ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಶೀನ ಸಾಲ್ಯಾನ್ ಅವರು ದಿನಾಂಕ: 19-08-2024 ರಂದು ಸಂಜೆ ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ನ ಶಾಂಭವಿ ಅಪಾರ್ಟಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಆರೋಪಿ ಮಹಮ್ಮದ್ ಶಾರೀಕ್ (28) ಎಂಬಾತ ಅಮಲಿನಲ್ಲಿದ್ದು ತೂರಾಡುತ್ತಿದ್ದು ಆತ ಗಾಂಜಾ ಸೇವನೆ ಮಾಡಿದ ಅನುಮಾನದ ಮೇರೆಗೆ ಆತನನ್ನು ಬಂಧಿಸಿ ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.
ದಿನಾಂಕ 21/08/2024 ರಂದು ಆರೋಪಿ ಮಹಮ್ಮದ್ ಶಾರೀಕ್ ನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27 NDPS ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.