Spread the love
  • ಕುಂದಾಪುರ: ದಿನಾಂಕ 15/08/2024 ರಂದು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಚೋದ್ರಿ ಮನೆ ಕೊಡ್ಲು ಎಂಬಲ್ಲಿರುವ ಸರ್ಕಾರಿ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂದು ದೊರೆತ ಗುಪ್ತ ಮಾಹಿತಿಯಂತೆ  ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ನೂತನ್ ಡಿ. ಈ ಅವರು ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
  • ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 1) ಶಂಕರ, 2) ಶೇಖರ, 3) ಗಜೇಂದ್ರ , 4) ಮಹೇಶ ಎಂಬವರನ್ನು ವಶಕ್ಕೆ ಪಡೆದು ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು ಹಣ ರೂಪಾಯಿ 7,320/-, ಬಿಳಿ ಬಣ್ಣದ ಪ್ಲಾಸ್ಟಿಕ್‌ ಶೀಟ್ , ಇಸ್ಪೀಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ .
  • ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 87 K P Act ರಂತೆ ಪ್ರಕರಣ ದಾಖಲಾಗಿದೆ.
  • ಕುಂದಾಪುರದ ಕಾಳಾವರದಲ್ಲಿ ಇನ್ನೊಂದು ಇಸ್ಪೀಟ್ ಜುಗಾರಿ ಅಡ್ಡೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಿನ್ನೂರ ಸಂಗಣ್ಣ ಅವರು ದಾಳಿ ನಡೆಸಿದ್ದಾರೆ.
  • ದಿನಾಂಕ 15/08/2024 ರಂದು ಕಾಳಾವರ ಗ್ರಾಮದ ಸಳ್ವಾಡಿಯ ನಿರೋಣಿ ಮನೆ ಬಳಿಯ ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ದೊರೆತ ಮಾಹಿತಿ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ಕಾ&ಸು) ಸಿನ್ನೂರ ಸಂಗಣ್ಣ ಅವರು ಕೂಡಲೇ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಸಂಜೀವ, 2) ರಾಘವೇಂದ್ರ , 3) ಯೋಗಿಶ , 4) ಭಾಸ್ಕರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ನಗದು ಹಣ ರೂಪಾಯಿ 3800/-, ಬಿಳಿ ಬಣ್ಣದ ಪ್ಲಾಸ್ಟಿಕ್‌, ಇಸ್ಪೀಟ್ ಎಲೆಗಳನ್ನು, ಕ್ಯಾಂಡಲ್  ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 87 K P Act ರಂತೆ ಪ್ರಕರಣ ದಾಖಲಾಗಿದೆ.
error: No Copying!