Spread the love
  • ಗಂಗೊಳ್ಳಿ: ದಿನಾಂಕ: 17/08/2024(ಹಾಯ್ ಉಡುಪಿ ನ್ಯೂಸ್) ಮಾವಿನಗುಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐದು ಜನರನ್ನು ಗಂಗೊಳ್ಳಿ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಬಸವರಾಜ ಕನಶೆಟ್ಟಿ ಅವರು ಬಂಧಿಸಿದ್ದಾರೆ.
  • ಗಂಗೊಳ್ಳಿ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಬಸವರಾಜ ಕನಶೆಟ್ಟಿ ಅವರು ದಿನಾಂಕ : 15-08-2024 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಆಲೂರು ಗ್ರಾಮದ ಮಾವಿನಗುಳಿ ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
  • ದಾಳಿ ನಡೆಸಿದಾಗ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತರಾದ 1) ಸೂಲಿ, 2) ಚೇತನ್‌ , 3) ಕರುಣಾಕರ, 4) ಸುಭಾಷ್‌ , 5) ಮಣಿಕಂಠ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು, ಆಪಾದಿತರಿಂದ ನಗದು 1500/- ರೂ, ಇಸ್ಪೀಟ್ ಎಲೆಗಳು , ಹಾಗೂ ನೆಲಕ್ಕೆ ಹಾಸಿದ ಪ್ಲಾಸ್ಟಿಕ್‌ ಶೀಟ್‌ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ  ಕಲಂ: 87 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.
error: No Copying!